ಕ್ರೀಡೆ

ಮೊಬೈಲ್ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಧೋನಿ

Pinterest LinkedIn Tumblr


ನವದೆಹಲಿ: ಒಪ್ಪಂದ ಮುಗಿದಿದ್ದರೂ ತನ್ನನ್ನು ಉತ್ಪನ್ನದ ರಾಯಭಾರಿ ಎಂಬಂತೆ ಪ್ರಚಾರ ಮಾಡುತ್ತಿರುವ ಮೊಬೈಲ್ ಕಂಪನಿ ವಿರುದ್ಧ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಡಿಸೆಂಬರ್ 2012ರಲ್ಲೇ ನನ್ನ ಮತ್ತು ಮ್ಯಾಕ್ಸ್ ಮೊಬಿಲಿಂಕ್ಸ್ ಪ್ರೈವೇಟ್ ಕಂಪನಿ ನಡುವೆ ಉತ್ಪನ್ನ ಪ್ರಚಾರದ ಒಪ್ಪಂದ ಸಮಾಪ್ತಿಯಾಗಿತ್ತು. ಆದರೂ ಆ ಸಂಸ್ಥೆ ತಾವು ಈಗಲೂ ಮೊಬೈಲ್ ಫೋ ನ್‍ನ ಪ್ರಚಾರ ರಾಯಭಾರಿ ಎಂಬಂತೆ ಬಿಂಬಿಸುತ್ತಿದೆ. ಇದರಿಂದ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡಿಕೊಂಡಿದೆ ಎಂದು ಧೋನಿ ಆರೋಪಿಸಿದ್ದಾರೆ. ಈ ಸಂಬಂಧ ದೆಹಲಿ ಹೈಕೋರ್ಟ್‍ಗೆ ಧೋನಿ ಮನವಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಮನಮೋಹನ್ ಮೊಬೈಲ್ ಕಂಪನಿಯ ಉನ್ನತಾಧಿಕಾರಿಯನ್ನು ಕೋರ್ಟ್ ಕರೆಸಿ ತರಾಟೆಗೆ ತೆಗೆದುಕೊಂಡಿದ್ಧಾರೆ. ನ್ಯಾಯಾಲಯದ ಆದೇಶವನ್ನು ಏಕೆ ಪಾಲಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಕರಾರು ಒಪ್ಪಂದ ಅವಧಿ ಮುಗಿದಿದ್ದರೂ ಪ್ರಚಾರಕ್ಕಾಗಿ ಖ್ಯಾತ ಕ್ರಿಕೆಟಿಗನನ್ನು ಬಳಸಿಕೊಂಡಿರುವುದು ತಪ್ಪು ಎಂದು ಹೇಳಿದ್ದಾರೆ.

Comments are closed.