ರಾಷ್ಟ್ರೀಯ

ತಮ್ಮ ಜೀವನ ಕಥೆಯನ್ನಾಧರಿಸಿದ ಚಿತ್ರ ದಂಗಲ್ ಗಾಗಿ ಇವರು ಸ್ವೀಕರಿಸಿದ್ದು 80 ಲಕ್ಷ ಸಂಭಾವನೆ

Pinterest LinkedIn Tumblr


ನವದೆಹಲಿ(ಜ.28): ಅಮೀರ್‌’ಖಾನ್ ನಟನೆಯ ದಂಗಲ್ ಚಿತ್ರ ಬಿಡುಗಡೆಯಾದ 20 ದಿನಗಳಲ್ಲಿ ವಿಶ್ವದಾದ್ಯಂತ ₹350 ಕೋಟಿ ಹಣ ಬಾಚಿಕೊಂಡಿತ್ತು. ಆದರೆ, ಈ ಚಿತ್ರಕ್ಕೆ ಪ್ರೇರಣೆಯಾದ ಮಾಜಿ ಕುಸ್ತಿಪಟು, ಕೋಚ್ ಮಹಾವೀರ್ ಸಿಂಗ್ ಪೋಗಟ್‌ಗೆ ಸಿಕ್ಕಿದ್ದು ಕೇವಲ 80 ಲಕ್ಷ ರೂಪಾಯಿಗಳು ಮಾತ್ರ.
ಹೌದು, ತಮ್ಮ ಜೀವನದ ಕಥೆಯನ್ನು ಅವರು ಚಿತ್ರ ಮಾಡಲು ಪಡೆದುಕೊಂಡಿದ್ದು 80 ಲಕ್ಷ ರು. ಮಾತ್ರ. ಕಾಮನ್‌’ವೆಲ್ತ್‌’ನಲ್ಲಿ ಚಿನ್ನದ ಪದಕ ಪಡೆದ ತಮ್ಮ ಮಕ್ಕಳು ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ಅವರ ಕುಸ್ತಿ ಬದುಕಿನ ಕುರಿತು ಹಂಚಿಕೊಂಡ ಜೀವನಕಥೆಗೆ ಚಿತ್ರದ ನಿರ್ಮಾಪಕರು ಮಹಾವೀರ್‌ಗೆ 80 ಲಕ್ಷ ಹಣ ನೀಡಿದ್ದಾರೆ.
ತಮಗೆ ಸಿಕ್ಕ ಹಣ ತೃಪ್ತಿ ತಂದಿದೆ ಎಂದಿರುವ ಅವರು, ಈ ಹಣವನ್ನು ಎಮ್ಮೆ ಖರೀದಿಸಲು ಬಳಸಿದ್ದಾರೆ ಎಂದು ಹೇಳಲಾಗಿದೆ.

Comments are closed.