ಕ್ರೀಡೆ

ಮುಂಬೈಯಲ್ಲಿ ರಾಷ್ಟ್ರೀಯ ಈಜುಪಟು ತನಿಕಾ ಧಾರಾ ಆತ್ಮಹತ್ಯೆಗೆ ಶರಣು

Pinterest LinkedIn Tumblr

ಮುಂಬೈ: ಸೆಂಟ್ರಲ್ ಮುಂಬೈನ ಲೊವರ್ ಪರೆಲ್ ನ ನಿವಾಸದಲ್ಲಿ ರಾಷ್ಟ್ರೀಯ ಈಜುಪಟು ತನಿಕಾ ಧಾರಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

23 ವರ್ಷದ ತನಿಖಾ ಧಾರಾ ಪಶ್ಚಿಮ ವಲಯ ರೈಲ್ವೆಯಲ್ಲಿ ಜೂನಿಯರ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ತನಿಖಾ ಇದೀಗ ಆತ್ಮಹತ್ಯೆಗೆ ಶರಣಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

2015ರಲ್ಲಿ ನಡೆದ 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ತನಿಕಾ 70ನೇ ರಾಷ್ಟ್ರೀಯ ಈಜು ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಗೆದ್ದಿದ್ದರು.

ತನಿಕಾ ಪೋಷಕರು ಕೊಲ್ಕತ್ತಾದಲ್ಲಿ ವಾಸವಾಗಿದ್ದು ಮಗಳ ಸಾವಿನ ಕುರಿತು ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.