ಕ್ರೀಡೆ

ನಾಯಕ ಕೊಹ್ಲಿಯಾದರು ಮೈದಾನದಲ್ಲಿ ಧೋನಿಯೇ ನಾಯಕ…!

Pinterest LinkedIn Tumblr

ಇಂಗ್ಲೆಂಡ್ ಏಕದಿನ ಸರಣಿ ಮೂಲಕ ಟೀಂ ಇಂಡಿಯಾಗೆ ಪೂರ್ಣ ಪ್ರಮಾಣದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿದ್ದಾರೆ. ಆದರೆ ಮೈದಾನದಲ್ಲಿ ಮಾತ್ರ ಇನ್ನು ಧೋನಿಯೇ ನಾಯಕ.

ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕತ್ವಕ್ಕೆ ಧೋನಿ ನಿವೃತ್ತಿ ಘೋಷಿಸಿದ್ದರು. ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನೇ ಏಕದಿನ ಮತ್ತು ಟಿ20 ಮಾದರಿಗೆ ನಾಯಕನ್ನಾಗಿ ಆಯ್ಕೆ ಮಾಡಿತ್ತು. ಅಂತೆ ನಿನ್ನೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕನಾಗಿದ್ದಾರೆ.

ಹಾರ್ದಿಕ್ ಪಾಂಡ್ಯಾ ಮಾಡಿದ 26ನೇ ಓವರ್ ನ ಕೊನೆಯ ಎಸೆತವನ್ನು ಇಂಗ್ಲೆಂಡ್ ತಂಡದ ಆಟಗಾರ ಮೋರ್ಗನ್ ಡಿಪೆನ್ಸ್ ಮಾಡಿದರು. ಬ್ಯಾಟ್ ತಗುಲಿದ ಚೆಂಡುನ್ನು ಕೀಪರ್ ಧೋನಿ ಹಿಡಿದು ಅಪೀಲ್ ಮಾಡಿದರು. ಆದರೆ ಅಂಪೈರ್ ಔಟ್ ಕೊಡದಿದ್ದರಿಂದ ಧೋನಿ ಕೂಡಲೇ ಅಂಪೈರ್‌ ತೀರ್ಪು ಪುನರ್‌ ಪರಿಶೀಲನೆ (ಡಿಆರ್‌ಎಸ್‌)ಗೆ ಅಪೀಲ್ ಮಾಡಿದರು. ಇದಾದ ನಂತರ ವಿರಾಟ್ ಕೊಹ್ಲಿ ಡಿಆರ್‌ಎಸ್ಗೆ ಅಪೀಲ್ ಮಾಡಿದರು. ಇದನ್ನು ನೋಡಿದರೆ ಧೋನಿ ತಂಡದ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿ ಮೈದಾನದಲ್ಲಿ ನಾಯಕನ ಪಾತ್ರ ನಿಭಾಯಿಸುತ್ತಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ, ಪಂದ್ಯಕ್ಕೂ ಮುನ್ನ ಮಾತನಾಡಿದ್ದ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಅನುಭವಿ ನಾಯಕನಾಗಿದ್ದ ಎಂಎಸ್ ಧೋನಿ ಅವರ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತೇನೆ. ಜತೆಗೆ ಡಿಆರ್ಎಸ್ ಅಪೀಲ್ ಗಳನ್ನು ಧೋನಿಯನ್ನು ಕೇಳಿದ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ವಿರಾಟ್ ಹೇಳಿದ್ದರು.

Comments are closed.