ಕ್ರೀಡೆ

ಮತ್ತೆ ಭಾರತ ತಂಡಕ್ಕೆ ಧೋನಿ ನಾಯಕ!

Pinterest LinkedIn Tumblr


ಮುಂಬೈ: ಅರೇ.. ಅದು ಹೇಗೆ ಸಾಧ್ಯ. ಮೊನ್ನೆ ತಾನೇ ಧೋನಿ ಟೀಂ ಇಂಡಿಯಾ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ರಲ್ವಾ? ಎಂದು ನೀವು ಕೇಳಬಹುದು. ಆದರೂ ಇದು ನಿಜ. ಧೋನಿಯನ್ನು ಇಂದು ನಡೆದ ಆಯ್ಕೆ ಸಮಿತಿ ನಾಯಕನನ್ನಾಗಿ ಮಾಡಿದೆ.

ಆದರೆ ಇದು ಟೀಂ ಇಂಡಿಯಾಗಲ್ಲ. ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸುವ ಭಾರತ ಎ ತಂಡಕ್ಕೆ. ಒಂದು ಪಂದ್ಯಕ್ಕೆ ಅಜಿಂಕ್ಯ ರೆಹಾನೆ ನಾಯಕನಾದರೆ, ಇನ್ನೊಂದು ಪಂದ್ಯಕ್ಕೆ ಧೋನಿಯನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.

ಇದರೊಂದಿಗೆ ನಾಯಕನ ಪಟ್ಟವನ್ನು ಧೋನಿ ಬಿಟ್ಟರೂ, ನಾಯಕನ ಪಟ್ಟ ಧೋನಿಯನ್ನು ಬಿಡುವ ಲಕ್ಷಣ ಕಾಣುತ್ತಿಲ್ಲ. ಧೋನಿ ಹಲವು ದಿನಗಳಿಂದ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿಲ್ಲ. ಹೀಗಾಗಿ ಅವರಿಗೂ ಒಂದು ಅಭ್ಯಾಸವಾದಂತಾಗಲು ಎ ತಂಡದೊಂದಿಗೆ ಕಣಕ್ಕಿಳಿಯಲಿದ್ದಾರೆ. ಈ ತಂಡದಲ್ಲಿ ಯುವರಾಜ್ ಸಿಂಗ್ ಸೇರಿದಂತೆ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿರುವ ಬಹುತೇಕರು ಇದ್ದಾರೆ.

Comments are closed.