ಕ್ರೀಡೆ

ವಿರಾಟ್ ಕೊಹ್ಲಿ ಟೀo ಇಂಡಿಯಾ ನಾಯಕ

Pinterest LinkedIn Tumblr


ನವದೆಹಲಿ, ಜ 5- ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರಸಿಂಗ್ ಧೋನಿ ಏಕದಿನ ಹಾಗೂ ಟಿ-20 ಕ್ರಿಕೆಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮುಂದಿನ ನಾಯಕನಾಗಿ ಬಿಸಿಸಿಐ ಪ್ರಕಟಿಸಿದೆ.

ಇಂಗ್ಲೆಂಡ್‌ ವಿರುದ್ಧದ ಏಕದಿನ ಹಾಗೂ ಟಿ–20 ಕ್ರಿಕೆಟ್‌ ಪಂದ್ಯಗಳಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದ್ದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನೇತೃತ್ವ ವಹಿಸಲಿದ್ದು, ಯುವರಾಜ್ ಸಿಂಗ್ ಮತ್ತೆ ತಂಡಕ್ಕೆ ಮರಳಿದ್ದಾರೆ.

ಭಾರತ– ಇಂಗ್ಲೆಂಡ್‌ ನಡುವಿನ ಏಕದಿನ ಸರಣಿ ಜನವರಿ 15ರಿಂದ ಪ್ರಾರಂಭವಾಗಲಿದೆ. ಬಿಸಿಸಿಐನ ಎಂ. ಎಸ್‌.ಕೆ ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿಯು ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ.

ಟೆಸ್ಟ್‌, ಏಕದಿನ ಹಾಗೂ ಟಿ–20 ಎಲ್ಲ ಹಂತಗಳಿಗೂ ವಿರಾಟ್‌ ಕೊಹ್ಲಿ ನಾಯಕರಾಗಿ ಆಯ್ಕೆಯಾಗಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ.

ಏಕದಿನ ಕ್ರಿಕೆಟ್‌ ತಂಡ: ವಿರಾಟ್‌ ಕೊಹ್ಲಿ(ನಾಯಕ) ಕೆ.ಎಲ್‌ ರಾಹುಲ್‌, ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ಎಂ.ಎಸ್‌ ದೋನಿ, ಮನೀಷ್‌ ಪಾಂಡೆ, ಯುವರಾಜ್‌ ಸಿಂಗ್‌, ಹಾರ್ದಿಕ್‌ ಪಾಂಡ್ಯ, ಆರ್‌ ಅಶ್ವಿನ್‌, ಕೇದಾರ್‌ ಜಾದವ್‌, ರವೀಂದ್ರ ಜಡೇಜಾ, ಜೆಸ್ಪ್ರಿತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌ ಹಾಗೂ ಉಮೇಶ್‌ ಯಾದವ್‌.

ಟಿ–20 ಕ್ರಿಕೆಟ್‌ ತಂಡ: ವಿರಾಟ್‌ ಕೊಹ್ಲಿ(ನಾಯಕ) ಕೆ.ಎಲ್‌ ರಾಹುಲ್‌, ಮಂದೀಪ್‌ ಸಿಂಗ್‌, ಎಂ.ಎಸ್‌ ದೋನಿ, ಸುರೇಶ್‌ ರೈನಾ, ಯುವರಾಜ್‌ ಸಿಂಗ್‌, ರಿಷಬ್‌ ಪಂಥ್‌, ಹಾರ್ದಿಕ್‌ ಪಾಂಡ್ಯ, ಆರ್‌ ಅಶ್ವಿನ್‌, ರವೀಂದ್ರ ಜಡೇಜಾ, ಯುಜ್‌ವೇಂದ್ರ ಚಾಹಲ್‌, ಜೆಸ್ಪ್ರಿತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ಆಶಿಶ್‌ ನೆಹ್ರಾ.

Comments are closed.