ಕ್ರೀಡೆ

ಸೊಸೆಯ ಉಡುಪಿನ ಪರ ನಿಂತ ಮೊಹಮ್ಮದ್ ಶಮಿ ತಂದೆ

Pinterest LinkedIn Tumblr

sami
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಸ್ಟೈಲಿಶ್ ಉಡುಪು ಇತ್ತೀಚೆಗೆ ಮುಸ್ಲಿಂ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ತಮ್ಮ ಸೊಸೆಯ ದಿರಿಸಿನ ಬಗ್ಗೆ ಪ್ರಶ್ನಿಸಿದವರಿಗೆ ಶಮಿ ತಂದೆ ತೌಸೀಫ್ ನಮಗೆ ಇಸ್ಲಾಂ ಹೇಳಿಕೊಡಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶಮಿ ಪತ್ನಿಯೊಂದಿಗೆ ತೆಗೆಸಿಕೊಂಡಿದ್ದ ಫೋಟೋ ವಿವಾದಕ್ಕೆ ಕಾರಣವಾಗಿತ್ತು. ಅಶ್ಲೀಲವಲ್ಲದಿದ್ದರೂ, ಸ್ಟೈಲಿಶ್ ಗೌನ್ ತೊಟ್ಟು ಶಮಿ ಪತ್ನಿ ಕಾಣಿಸಿಕೊಂಡಿದ್ದರು. ಇದರ ಬಗ್ಗೆ ಹಲವು ಕಟ್ಟಾ ಮುಸ್ಲಿಂ ಅನುಯಾಯಿಗಳು ಆಕ್ಷೇಪವೆತ್ತಿದ್ದರು. ಈ ವಿಷಯವಾಗಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಶಮಿ ಪರವಾಗಿ ನಿಂತಿದ್ದರು.

ಇದೀಗ ಶಮಿ ತಂದೆ ತೌಸೀಫ್ ಸೊಸೆಯ ಪರವಾಗಿ ಮಾತನಾಡಿದ್ದು, ನಮಗೆ ಇಸ್ಲಾಂ ಎಂದರೇನೆಂದು ಚೆನ್ನಾಗಿ ಗೊತ್ತು. ಯಾರೂ ಹೇಳಿಕೊಡಬೇಕಾಗಿಲ್ಲ. ಇದೆಲ್ಲಾ ನನ್ನ ಮಗನಿಗೆ ಕಿರುಕುಳ ನೀಡುವ ತಂತ್ರವಷ್ಟೇ. ಎಲ್ಲರೂ ಹೀಗೇ ನನ್ನ ಮಗನಿಗೆ ಬೆಂಬಲಿಸುವುದನ್ನು ಮುಂದುವರಿಸಿ ಎಂದಿದ್ದಾರೆ.

Comments are closed.