ರಾಷ್ಟ್ರೀಯ

ಬಯಲಲ್ಲಿ ಶೌಚ ಮಾಡುವರೊಂದಿಗೆ ಸೆಲ್ಫೀಗೆ 500 ರೂ. ಬಹುಮಾನ!

Pinterest LinkedIn Tumblr

toilet
ಬುಲ್ದಾನ: ಬಯಲಲ್ಲಿ ಶೌಚ ಮಾಡುತ್ತಿರುವವರೊಂದಿಗೆ ಸೆಲ್ಫೀ ತಗೊಂಡ್ರೆ 500 ರೂ. ಬಹುಮಾನ ನೀಡುವ ಒಂದು ಹೊಸ ಅಭಿಯಾನವನ್ನು ಮಹಾರಾಷ್ಟ್ರದಲ್ಲಿ ಆರಂಭಿಸಲಾಗಿದೆ.

ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಚಂದೋಲ್ ಗ್ರಾಮ ಪಂಚಾಯತ್ ಈ ಅಭಿಯಾನವನ್ನ ಶುರು ಮಾಡಿದೆ. ಗ್ರಾಮದಲ್ಲಿ ಯಾರದ್ರೂ ಬಯಲಲ್ಲಿ ಶೌಚ ಮಾಡುತ್ತಿದ್ದರೆ, ಅವರೊಂದಿಗೆ ಸೆಲ್ಫಿ ತೆಗೆದುಕೊಂಡಲ್ಲಿ 500ರೂ. ಬಹುಮಾನವಾಗಿ ನೀಡುವುದಾಗಿ ಗ್ರಾಮ ಪಂಚಾಯತ್ ಹೇಳಿದೆ.

ಬಯಲಿನಲ್ಲಿ ಶೌಚ ಮಾಡುವವರಿಗೆ ನಾಚಿಕೆಯಾಗುವಂತೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ.ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಸಹಾಯ ಮಾಡಲು ಈ ಪಂಚಾಯತ್ ನಿರ್ಧರಿಸಿದೆ.

ಶೌಚ ಮಾಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ಆತ/ಅವರೊಂದಿಗೆ ಸೆಲ್ಫಿ ತೆಗೆದುಕೊಂಡಲ್ಲಿ ಅಂತಹವರಿಗೆ ಅವಮಾನವಾಗಿ ಜನರು ಬಯಲಲ್ಲಿ ಶೌಚ ಮಾಡುವುದನ್ನು ನಿಲ್ಲಿಸುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.

Comments are closed.