ಕ್ರೀಡೆ

ಯಾವ ದೇಶದ ಕ್ರಿಕೆಟ್ ಆಟಗಾರರು ಯಾವ ಆಹಾರವನ್ನು ಇಷ್ಟಪಡುತ್ತಾರೆ ಕುರಿತು ಒಂದು ಮಾಹಿತಿ

Pinterest LinkedIn Tumblr

iron_food_helthಕ್ರಿಕೆಟಿಗರು ಲಂಚ್ ಟೈಮಲ್ಲಿ ಹಾಗೂ ಟೀ ಬ್ರೇಕ್’ನಲ್ಲಿ ಏನನ್ನು ಸವಿಯುತ್ತಾರೆ. ಯಾವ ದೇಶದ ಆಟಗಾರರು ಯಾವ ಆಹಾರವನ್ನು ಇಷ್ಟಪಡುತ್ತಾರೆ. ಅವರಿಗಾಗಿ ಏನನ್ನು ಸಿದ್ದಪಡಿಸಲಾಗುತ್ತದೆ ಎಂಬ ಕುತೂಹಲ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಿರುತ್ತದೆ. ಕ್ರಿಕೆಟಿಗರ ಊಟದ ಇಂಟರೆಸ್ಟಿಂಗ್ ವಿಚಾರಗಳು ಇಲ್ಲವೆ ನೋಡಿ.
1) 5 ದಿನದ ಟೆಸ್ಟ್ ಕ್ರಿಕೆಟ್’ನಲ್ಲಿ ದಿನವೊಂದಕ್ಕೆ 3 ಸೆಷನ್’ನಲ್ಲಿ ಆಟ ನಡೆಯಲಿದ್ದು ಲಂಚ್’ನಲ್ಲಿ ಪ್ರತಿಯೊಂದು ದೇಶದ ಆಟಗಾರರಿಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅದಕ್ಕಾಗಿಯೇ ಅಂತರರಾಷ್ಟ್ರೀಯ ಮಟ್ಟದ ಶೆಫ್’ಗಳು ಹಾಗೂ ಆಹಾರ ಪರಿಣಿತರನ್ನು ಕರೆಸಲಾಗುತ್ತದೆ.
2) ಆಹಾರ ಕ್ರಮದಲ್ಲಿ ಬಹುತೇಕ ಮಾಂಸಾಹಾರ ಖಾದ್ಯಗಳನ್ನು ತಯಾರಿಸಲಾದರೂ ಭಾರತೀಯರಲ್ಲಿ ಸಸ್ಯಾಹಾರಿ ಆಟಗಾರರು ಇರುವುದರಿಂದ ಅವರಿಗಾಗಿ ಸಸ್ಯಾಹಾರಿ ಅಡುಗೆಯನ್ನು ಮಾಡಲಾಗುತ್ತದೆ.
3) ಬೆಳಗಿನ ಉಪಹಾರದ ಸಂದರ್ಭದಲ್ಲಿ ಭಾರತೀಯರಿಗಾದರೆ ಕಾಳಿಗಳ ತಿನಿಸು, ಪಿಸ್ತಾ, ಫ್ರೂಟ್ಸ್ ಸಾಲಡ್ ಅಥವಾ ಸ್ಯಾಂಡ್’ವಿಜ್, ಶೀತ ಮಿಶ್ರಿತ ಮಾಂಸ, ಮೀನು, ಜಾಮ್, ಕಡಲೆ ಕಾಯಿ ಬೆಣ್ಣೆ ನೀಡಲಾಗುತ್ತದೆ.
4) ಮಧ್ಯಾಹ್ನದ ಊಟದ ಸಮಯದಲ್ಲಿ 5 ರಿಂದ 6 ತರಹದ ಭಕ್ಷ್ಯಗಳಿರುತ್ತವೆ. ಪಂದ್ಯವಾಡುವ 2 ತಂಡಗಳ ದೇಶಗಳಲ್ಲಿ ಪ್ರಮುಖವಾದ ಆಹಾರಗಳನ್ನು ತಯಾರಿಸಲಾಗಿರುತ್ತದೆ. ಭಾರತೀಯರಲ್ಲಿ ಸಸ್ಯಾಹಾರಿಗಳಿದ್ದರೆ ಮಾತ್ರ ಸಸ್ಯಾಹಾರದ ಭಕ್ಷ್ಯಗಳಿರುತ್ತವೆ. ಬೇರೆ ತಂಡಗಳಿದ್ದರೆ ಬಹುತೇಕ ಮಾಂಸಾಹಾರಕ್ಕೆ ಮೀಸಲು
5) ಪಾಕಿಸ್ತಾನ,ಬಾಂಗ್ಲಾದೇಶ ತಂಡಗಳಿದ್ದರೆ ಚಿಕನ್,ಮಟನ್,ಬೀಫ್ ಭಕ್ಷ್ಯಗಳಿರುತ್ತವೆ. ಹೆಚ್ಚಾಗಿ ಇವರುಗಳಿಗೆ ಕರಿದ ಪದಾರ್ಥಗಳನ್ನು ತಯಾರಿಸಲಾಗುತ್ತದೆ.
6) ಇಂಗ್ಲೆಂಡ್ ತಂಡದ ಆಟಗಾರರಿಗೆ ಮಾಂಸಾಹಾರದಲ್ಲಿ ಪೋರ್ಕ್’ಅನ್ನು ತಯಾರಿಸಲಾಗುತ್ತದೆ.
7) ವೆಸ್ಟ್ ಇಂಡೀಸ್ ಆಟಗಾರರು ಹೆಚ್ಚಾಗಿ ಚೈನೀಸ್ ಭಕ್ಷ್ಯಗಳನ್ನು ಇಷ್ಟಪಡುತ್ತಾರೆ.
8) ಭಾರತದ ವಿರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ, ಸುರೇಶ್ ರೈನಾ, ಜಾವಗಲ್ ಶ್ರೀನಾಥ್, ಇಶಾಂತ್ ಶರ್ಮಾ, ಆರ್. ಅಶ್ವಿನ್ ಸಸ್ಯಾಹಾರಿಗಳು. ಇವರು ಯಾವ ದೇಶಕ್ಕೆ ಕ್ರಿಕೆಟ್ ಆಡಲು ಹೋದರು ಸಸ್ಯಾಹಾರ ಮೀಸಲು.
9) ತಯಾರಿಸಿರುವ ಅಡುಗೆಯಲ್ಲಿ ಎರಡೂ ತಂಡಗಳ ಎಲ್ಲ ಆಟಗಾರರೂ ಇಷ್ಟಪಡುವ ಕೆಲವು ಭಕ್ಷ್ಯಗಳಂತೂ ಇದ್ದೇ ಇರುತ್ತವೆ. ಶೆಫ್’ಗಳು ಪ್ರತಿಯೊಬ್ಬ ಆಟಗಾರರನ್ನು ಗಮದಲ್ಲಿಟ್ಟುಕೊಂಡು ಆಹಾರಗಳನ್ನು ತಯಾರಿಸುತ್ತಾರೆ.

Comments are closed.