ಬೆಂಗಳೂರು: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿರುವ ಭಾರತ ಹಾಕಿ ತಂಡ ಟ್ರೋಫಿಯನ್ನು ‘ಉರಿ’ ದಾಳಿಯಲ್ಲಿ ಮೃತ್ತಪಟ್ಟ ಯೋಧರಿಗೆ ಆರ್ಪಿಸಿರುವುದಾಗಿ ಭಾರತ ಹಾಕಿ ತಂಡ ನಾಯಕ ಶ್ರೀಜೇಶ್ ತಿಳಿಸಿದ್ದಾರೆ.
ಏಷ್ಯನ್ ಚಾಂಪಿಯನ್ಸ್ ಹಾಕಿ ಟೂರ್ನಿಯ ಫೈನಲ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು 3–1 ಗೋಲುಗಳ ಅಂತರದಲ್ಲಿ ಭಾರತ ಸೋಲಿಸಿತ್ತು.
ಸೆಪ್ಟೆಂಬರ್ 18 ರಂದು ಕಾಶ್ಮೀರದ ‘ಉರಿ ಸೇನಾ ನೆಲೆ’ಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಭಾರತದ 20 ಕ್ಕೂ ಹೆಚ್ಚು ಯೋಧರು ಹತರಾಗಿದ್ದರು. ದೇಶ ಕಾಯುವ ಸೈನಿಕರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ದೀಪಾವಳಿಯ ಉಡುಗೊರೆಯಾಗಿ ಆರ್ಪಿಸಿರುವುದಾಗಿ ಪಿ.ಆರ್. ಶ್ರೀಜೇಶ್ ತಿಳಿಸಿದ್ದಾರೆ.
‘ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವೆಂದರೆ ಅದು ಯಾವಾಗಲೂ ವಿಶೇಷವೆ. ಆದ್ದರಿಂದ ಇದು ವಿಶೇಷ ವಿಜಯ’. ಫೈನಲ್ ಪಂದ್ಯದಲ್ಲಿ ನಮ್ಮ ತಂಡ ಆಟಗಾರರು ಭಾವನಾತ್ಮಕವಾಗಿ ಆಟವಾಡಿದರು ಎಂದರು.
ಲೀಗ್ ಪಂದ್ಯಗಳಲ್ಲಿ ಭಾರತ ಎದುರಿಸಿದ 7 ಪಂದ್ಯಗಳಲ್ಲಿ 6 ಗೆಲುವು,1 ಡ್ರಾ ಸಾಧಿಸುವ ಮೂಲಕ ಫೈನಲ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿದ್ದೆವು. ಇದಕ್ಕೆ ಸತತ ಪ್ರಯತ್ನವೇ ಸಾಕ್ಷಿ ಎಂದರು.
Comments are closed.