ಕ್ರೀಡೆ

ಈ ಕ್ರಿಕೆಟಿಗ ಕೆಲವು ಸಮಯದ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದನಂತೆ !

Pinterest LinkedIn Tumblr

brad-hogg

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಒಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಕ್ರಿಕೆಟ್ ಕೈ ಕೊಟ್ಟು, ಪತ್ನಿಯ ಜತೆಗಿನ ವಿರಸದಿಂದ ಬೇಸತ್ತು ಅವರು ಈ ನಿರ್ಧಾರಕ್ಕೆ ಬಂದಿದ್ದರಂತೆ.

ಹಾಗೆಂದು ಅವರ ಜೀವನ ಚರಿತ್ರೆ “ದಿ ರಾಂಗ್ ಯುಎನ್” ನಲ್ಲಿ ಬರೆದುಕೊಂಡಿದ್ದಾರೆ. 2007 ರಲ್ಲಿ ಅವರ ವೈವಾಹಿಕ ಜೀವನ ಎಷ್ಟರಮಟ್ಟಿಗೆ ಹದಗೆಟ್ಟಿತ್ತೆಂದರೆ ಕ್ರಿಕೆಟ್ ನಿಂದ ನಿವೃತ್ತಿಯಾಗದೇ ಬೇರೆ ದಾರಿಯೇ ಇರಲಿಲ್ಲವಂತೆ.

ಆಗ ಮದ್ಯ ವ್ಯಸನಿಯಾದೆ. ಕಚೇರಿ ಕೆಲಸದಲ್ಲಿ ನೆಮ್ಮದಿ ಇರಲಿಲ್ಲ. ಆ ದಿನಗಳಲ್ಲಿ ಕಾರನ್ನು ಪೋರ್ಟ್ ಬೀಚ್ ನಲ್ಲಿ ಪಾರ್ಕ್ ಮಾಡಿ ವಾಕಿಂಗ್ ಮಾಡುತ್ತಿದ್ದೆ. ಸಮುದ್ರದ ಕಡೆಗೆ ದಿಟ್ಟಿಸುತ್ತಾ ಆಳದವರೆಗೂ ಈಜುತ್ತೇನೆ. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೂ ಈಜುತ್ತೇನೆ. ಒಂದು ವೇಳೆ ಮರಳಲು ಸಾಧ್ಯವಾದರೆ ಸರಿ. ಇಲ್ಲದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ ಎಂದು ಯೋಚನೆ ಮಾಡುತ್ತಿದ್ದೆ” ಎಂದಿದ್ದಾರೆ.

ಹೀಗೇ ಅವರು ನಾಲ್ಕು ಬಾರಿ ಪ್ರಯತ್ನ ನಡೆಸಿದ್ದರಂತೆ. ಆದರೆ ಯೋಚಿಸಿದಷ್ಟು ಸುಲಭವಲ್ಲವಲ್ಲ ಯಾವುದೂ ಹಾಗಾಗಿ ನಾಲ್ಕೂ ಬಾರಿ ಪ್ರಯತ್ನ ತಪ್ಪಿ ಹೋಯಿತು ಎಂದು ಬ್ರಾಡ್ ಹೇಳಿಕೊಂಡಿದ್ದಾರೆ.

Comments are closed.