ಕ್ರೀಡೆ

‘ವಿರಾಟ್’ ಪ್ರದರ್ಶನ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗೆಲುವು

Pinterest LinkedIn Tumblr

ms-dhoni-virat-kohli

ಮೊಹಾಲಿ: ಉಪ ನಾಯಕ ವಿರಾಟ್ ಕೊಹ್ಲಿ (154*) ಸಿಡಿಸಿದ ಆಕರ್ಷಕ ಅಜೇಯ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ಭಾರತ ಏಳು ವಿಕೆಟ್ಗಳ ಗೆಲುವು ದಾಖಲಿಸಿತು. ಈ ಮೂಲಕ ಭಾರತ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತು.

ವಾರದ ರಜೆಯ ದಿನ ಇಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್ಗಳಿಂದ ಭರ್ಜರಿ ಜಯ ದಾಖಲಿಸಿದರು. ಇದರೊಂದಿಗೆ ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿತು. ನಾಲ್ಕು ದಿನಗಳ ಹಿಂದೆ ಕೋಟ್ಲಾ ಅಂಗಳದಲ್ಲಿ ಗೆದ್ದು ಮೆರೆದಿದ್ದ ಕೇನ್ ವಿಲಿಯಮ್ಸ್ಬಳಗದ ಸದ್ದು ಇಲ್ಲಿ ಅಡಗಿತು. ಮೊಹಾಲಿ ಅಂಗಳದಲ್ಲಿ ಶ್ರೇಷ್ಠ ವೈಯಕ್ತಿಕ ಮೊತ್ತ ದಾಖಲಿಸಿದ ವಿರಾಟ್ ಕೊಹ್ಲಿ (ಅಜೇಯ 154; 134ಎ, 16ಬೌಂ, 1ಸಿ) ಅವರ ಅಮೋಘ ಬ್ಯಾಟಿಂಗ್ ರಂಗೇರಿತು. ಧರ್ಮಶಾಲಾ ಪಂದ್ಯದಲ್ಲಿ ಅಜೇಯ 85 ರನ್ ಗಳಿಸಿದ್ದ ಅವರು ಕೋಟ್ಲಾದಲ್ಲಿ ಕೇವಲ 9 ರನ್ ಗಳಿಸಿ ಔಟಾಗಿದ್ದರು.

286 ರನ್ ಗುರಿ ಬೆನ್ನು ಹತ್ತಿದ ಭಾರತಕ್ಕೆ ಈ ಬಾರಿಯೂ ಉತ್ತಮ ಆರಂಭ ಸಿಗಲಿಲ್ಲ. ಹೆನ್ರಿ ಎಸೆತದಲ್ಲಿ ವಿಕೆಟ್ ಒಪ್ಪಿಸುವ ಮೂಲಕ ರಹಾನೆ (5) ನಿರಾಸೆ ಮೂಡಿಸಿದರು. ರೋಹಿತ್ ಶರ್ಮ ಕೂಡ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ನಾಯಕ ಧೋನಿ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಇಬ್ಬರು ಆಟಗಾರರು ತಲಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಮೂರನೇ ವಿಕೆಟ್ಗೆ ಈ ಜೋಡಿ 151 ರನ್ಗಳ ಜತೆಯಾಟ ಆಡಿತು. ಶತಕದ ಅಂಚಿನಲ್ಲಿ ಎಡವಿದ ಧೋನಿ (80) ಹೆನ್ರಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ನಡುವೆ ವಿರಾಟ್ ಶತಕ್ ಸಿಡಿಸಿ, ಸಂಭ್ರಮಿಸಿದರು. ತಮ್ಮ ಆಕ್ರಮಣ ಕಾರಿ ಆಟ ಮುಂದುವರಿಸಿದ ವಿರಾಟ್ ಇನ್ನು ನಾಲ್ಕು ಎಸೆತ ಬಾಕಿ ಇರುವಾಗಲೇ ಗೆಲುವಿನ ದಡ ತಲುಪಿಸಿದರು.

ನ್ಯೂಜಿಲೆಂಡ್ ಪರ ಹೆನ್ರಿ ಎರಡು ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು.ಇದಕ್ಕೂ ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಾರ್ಟಿನ್ ಗಫ್ಟಿಲ್(27) ಮತ್ತು ಲಾಥಮ್ ಜೋಡಿ 46 ರನ್ಗಳ ಜತೆಯಾಟ ಆಡುವ ಮೂಲಕ ಉತ್ತಮ ಆರಂಭ ಒದಗಿಸಿತು. ಕಳೆದ ಪಂದ್ಯದಲ್ಲಿ ಶತಕಗಳಿಸಿ ಗೆಲುವಿನ ರೂವಾರಿಯಾಗಿದ್ದ ನಾಯಕ ವಿಲಿಯಮ್ಸನ್(22) ಹೆಚ್ಚು ಹೊತ್ತು ಕ್ರೀಸ್ ಕಾಯ್ದುಕೊಳ್ಳುವಲ್ಲಿ ಈ ಬಾರಿ ವಿಫಲರಾದರು. ಆದರೆ ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ ರಾಸ್ ಟೇಲರ್ ಭಾರತೀಯ ಬೌಲರ್ಗಳನ್ನು ಕಾಡಿದರು. ಟೇಲರ್ ಮತ್ತು ಲಾಥಮ್ ಮೂರನೇ ವಿಕೆಟ್ಗೆ ಬರೋಬ್ಬರಿ 73 ರನ್ಗಳ ಜತೆಯಾಟ ಆಡಿದರು. ಲಾಥಮ್ೆ ಜಾಧವ್ ಫೆವಿಲಿಯನ್ ಹಾದಿ ತೋರಿಸಿದರೆ, ಟೇಲರ್ ಮಿಶ್ರಾ ಸ್ಪಿನ್ ಬಲೆಗೆ ಬಿದ್ದರು. ಕೆಳಹಂತದಲ್ಲಿ ಬ್ಯಾಟಿಂಗ್ಗಿಳಿದ ಆಲ್ರೌಂಡರ್ ನಿಶಾಮ ಏಳು ಬೌಂಡರಿ ಸಹಿತ ಅರ್ಧಶತಕ ಸಿಡಿ, ನ್ಯೂಜಿಲೆಂಡ್ ಸ್ಕೋರ್ 250ರ ಗಡಿ ದಾಟಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 49.4 ಓವರ್ಗೆ 285 ರನ್ಗೆ ಸರ್ವಪತನ ಕಂಡಿತು. ಭಾರತದ ಪರ ಉಮೇಶ್ ಯಾದವ್ ಮತ್ತು ಜಾಧವ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 285/10 (49.4)

ಬ್ಯಾಟಿಂಗ್: ಲಾಥಮ್ -61, ನಿಶಾಮ್ -57

ಬೌಲಿಂಗ್:

ಉಮೇಶ್ ಯಾದವ್- 73/3 (10)

ಕೇದಾರ್ ಜಾಧವ್ – 29/3 (5)

ಭಾರತ: 289/3 (49.2)

ಬ್ಯಾಟಿಂಗ್:

ವಿರಾಟ್ ಕೊಹ್ಲಿ – 154*

ಎಂ.ಎಸ್. ಧೋನಿ – 80

ಬೌಲಿಂಗ್:

ಮ್ಯಾಟ್ ಹೆನ್ರಿ – 56/2 (9.2)

ಪಂದ್ಯ ಪುರುಷೋತ್ತಮ: ವಿರಾಟ್ ಕೊಹ್ಲಿ

ಫಲಿತಾಂಶ: ಭಾರತಕ್ಕೆ 7 ವಿಕೆಟ್ಗಳ ಜಯ, ಸರಣಿಯಲ್ಲಿ 2–1ರ ಮುನ್ನಡೆ

Comments are closed.