ನವದೆಹಲಿ(ಅ.22): ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಆಧಾರಸ್ತಂಭ. ಮೈದಾನದಲ್ಲಿದ್ದಷ್ಟು ಹೊತ್ತು ಬೌಲರ್`ಗಳನ್ನ ಕಾಡುವ ಪರಿಪೂರ್ಣ ಬ್ಯಾಟ್ಸ್`ಮನ್. ಕೊಹ್ಲಿಯ ಆಕ್ರಮಣಕಾರಿ ಆಟ ಎಂತಹುದೆಂದರೆ ವಿಶ್ವದ ಘಟಾನುಘಟಿ ಬೌಲರ್`ಗಳೇ ಕೊಹ್ಲಿ ಎದುರು ಬೌಲ್ ಮಾಡುವುದಕ್ಕೆ ಬೆಚ್ಚುವುದುಂಟು.
ಆದರೆ, ಈ ಮೈದಾನದ ಕಿಂಗ್ ಈಗಲೂ ಒಬ್ಬರಿಗೆ ಭಯಪಡುತ್ತಾರೆ. ಅದು ಅವರ ಬಾಲ್ಯದ ಕೋಚ್ ರಾಜ್`ಕುಮಾರ್ ಶರ್ಮಾ ಅವರಿಗೆ. ಈ ಕುರಿತು ಸ್ವತಃ ಕೊಹ್ಲಿ ಹೇಳಿಕೊಂಡಿದ್ಧಾರೆ. ಕೋಚ್ ಮತ್ತು ಐಪಿಎಲ್ ತಂಡಕ್ಕೆ ತಮ್ಮ ನಿಷ್ಠೆ ಬಗ್ಗೆ ಹೇಳಿಕೊಂಡಿದ್ದಾರೆ. 1998ರಿಂದ ನಾನು ಒಬ್ಬರೇ ಕೋಚ್(ರಾಜ್ ಕುಮಾರ್ ಶರ್ಮಾ) ಹೊಂಡಿದ್ದೇನೆ ಮತ್ತು ಐಪಿಎಲ್`ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಇದ್ದೇನೆ ಎಂದಿದ್ಧಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕ್ರಿಕೆಟ್ ದಂತಕಥೆಗಳಾದ ಕಪಿಲ್ ದೇವ್, ಅನಿಲ್ ಕುಂಬ್ಳೆ ಮತ್ತು ಸೆಹ್ವಾಗ್ ಜೊತೆ ವೇದಿಕೆ ಹಂಚಿಕೊಂಡಿದ್ದ ಕೊಹ್ಲಿ, ತಾವು ಈಗಲೂ ಭಯಪಡುವ ವ್ಯಕ್ತಿ ಬಗ್ಗೆ ಹೇಳಿದ್ದಾರೆ.
`ಒಳ್ಳೆಯದಕ್ಕಾಗಿ ಬೈಯುವ ಆ ವ್ಯಕ್ತಿಗೆ ಮಾತ್ರ ನಾನು ಹೆದರುತ್ತೇನೆ. ಈಗಲೂ ಅವರೇನಾದರೂ ಹೇಳಿದರೆ ಗೌರವಪೂರ್ವಕವಾಗಿ ಸ್ವೀಕರಿಸುತ್ತೇನೆ. ತಿರುಗಿಸಿ ಮಾತನಾಡುವುದಿಲ್ಲ. ಆ ರೀತಿ ಯಾರಾದರೂ ಇರುವುದು ಉತ್ತಮ’ ಎಂದು ಕೊಹ್ಲಿ ಹೇಳುತ್ತಾರೆ.