ಕ್ರೀಡೆ

ಜಿಂಬಾಬ್ವೆ ಮಾಜಿ ನಾಯಕನಿಂದ ಧೋನಿ ಕುರಿತು ಪೆದ್ದು ರೀತಿಯಲ್ಲಿ ಟ್ವೀಟ್

Pinterest LinkedIn Tumblr

dhoni-taylorನವದೆಹಲಿ: ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತು ಪೆದ್ದು ರೀತಿಯಲ್ಲಿ ಟ್ವೀಟ್ ಮಾಡಿರುವ ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್ ಪೇಚಿಗೆ ಸಿಲುಕಿದ್ದಾರೆ.
ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾದ ಹನ್ನೊಂದರಲ್ಲಿ ಎಂಎಸ್ ಧೋನಿ ಅವರ ಹೆಸರಿದ್ದಿದ್ದನ್ನು ಕಂಡ ಬ್ರೆಂಡನ್ ಟೇಲರ್ ಏಕದಿನ ಪಂದ್ಯವನ್ನು ಟೆಸ್ಟ್ ಪಂದ್ಯ ಎಂದು ತಪ್ಪಾಗಿ ಭಾವಿಸಿ ಧೋನಿ ಟೆಸ್ಟ್ ನಿಂದ ನಿವೃತ್ತಿ ಹೊಂದಿದ್ದಾರಲ್ಲ. ಮತ್ತೇಕೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಟ್ವೀಟಿಸಿ ಇದೀಗ ಪೇಚಿಗೆ ಸಿಲುಕಿದ್ದಾರೆ.
I thought MSD retired from tests? #indvsnz

— Brendan Taylor (@BrendanTaylor86) October 16, 2016
ಎಂಎಸ್ ಧೋನಿ ಬಗ್ಗೆ ಬ್ರೆಂಡನ್ ಟೈಲರ್ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆ ಧೋನಿ ಅಭಿಮಾನಿಗಳು ಬ್ರೆಂಡನ್ ಕಾಲು ಎಳೆದಿದ್ದಾರೆ.
ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಬ್ರೆಂಡನ್ ಟೇಲರ್ ಕೂಡಲೇ ತಾವು ತಪ್ಪಾಗಿ ಅರ್ಥೈಸಿಕೊಂಡು ಟ್ವೀಟ್ ಮಾಡಿದ್ದು ತಮ್ಮ ತಪ್ಪಿಗಾಗಿ ಕ್ಷಮಾಪಣೆ ಕೇಳಿದ್ದಾರೆ. ಕ್ರಿಕೆಟ್ ಗೊತ್ತಿಲ್ಲದವರು ಈ ರೀತಿ ಟ್ವೀಟ್ ಮಾಡಿದರೆ ಸರಿ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ದೇಶವನ್ನು ಪ್ರತಿನಿಧಿಸುವ ಕ್ರಿಕೆಟ್ ಆಟಗಾರನೊಬ್ಬ ಈ ರೀತಿ ಪೆದ್ದತನದಿಂದ ಮಾತನಾಡಿರುವುದು ಹಾಸ್ಯಾಸ್ಪದವಾಗಿದೆ.
@BrendanTaylor86 apologies! I thought there was one more test ? losing my mind?

— Brendan Taylor (@BrendanTaylor86) October 16, 2016

Comments are closed.