ಕ್ರೀಡೆ

ಕುಸ್ತಿಪಟು ಸತ್ಯವ್ರತ್‌ ಜತೆ ಸಾಕ್ಷಿ ವಿವಾಹ ನಿಶ್ಚಿತಾರ್ಥ

Pinterest LinkedIn Tumblr

sakshi

ಹೊಸದಿಲ್ಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿರುವ ಕುಸ್ತಿ ತಾರೆ ಸಾಕ್ಷಿ ಮಲ್ಲಿಕ್ ರೋಹ್ಟಕ್‌ನಲ್ಲಿರುವ ತನ್ನ ನಿವಾಸದಲ್ಲಿ ಗೆಳೆಯ, ಕುಸ್ತಿಪಟು ಸತ್ಯವರ್ತ್ ಕಡಿಯಾನ್‌ರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡರು.

ಇದೊಂದು ಖಾಸಗಿ ಕಾರ್ಯಕ್ರಮ. ಕೇವಲ ವಧು-ವರ ಕುಟುಂಬದ ಸದಸ್ಯರು ಹಾಜರಾಗಿದ್ದಾರೆ. ಎಲ್ಲವೂ ಸುಗಮವಾಗಿ ನಡೆದಿದೆ ಎಂದು ಸತ್ಯವರ್ತ್ ತಂದೆ ಅರ್ಜುನ ಪ್ರಶಸ್ತಿ ವಿಜೇತ ಸತ್ಯವಾನ್ ಪೆಹ್ವಾನ್ ಸುದ್ದಿಗಾರರಿಗೆ ತಿಳಿಸಿದರು.

 ವರ ಸತ್ಯವರ್ತ್(22) ವಧು ಸಾಕ್ಷಿಗಿಂತ ಎರಡು ವರ್ಷ ದೊಡ್ಡವರು. ಈತ ರೋಹ್ಟಕ್‌ನಲ್ಲಿರುವ ತನ್ನ ತಂದೆಯ ಅಖಾಡದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಸತ್ಯವರ್ತ್ 2010ರ ಯೂತ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದರು. ಸತ್ಯವರ್ತ್ ಹಾಗು ಸಾಕ್ಷಿ ಕುಸ್ತಿ ಟೂರ್ನಿಯ ವೇಳೆ ಪರಸ್ಪರ ಪ್ರೀತಿಸಲಾರಂಭಿಸಿದ್ದರು.

Comments are closed.