ಕ್ರೀಡೆ

ಡಬ್ಲ್ಯುಡಬ್ಲ್ಯುಇಗೆ ಸೇರ್ಪಡೆಗೊಳ್ಳಲಿರುವ ಕುಸ್ತಿಪಟು ಸುಶೀಲ್ ಕುಮಾರ್

Pinterest LinkedIn Tumblr

sushil-kumar

ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಶೀಘ್ರದಲ್ಲೇ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ವೆುಂಟ್ಗೆ(ಡಬ್ಲ್ಯುಡಬ್ಲ್ಯುಇ) ಸೇರ್ಪಡೆಗೊಳ್ಳಲಿದ್ದಾರೆ.

ದಿ ಗ್ರೇಟ್ ಖಲಿಯಂತೆ ಡಬ್ಲ್ಯುಡಬ್ಲ್ಯುಇಗೆ 33 ವರ್ಷದ ಸುಶೀಲ್ ಕುಮಾರ್ ಎಂಟ್ರಿ ಕೊಡಲಿದ್ದಾರೆ. ಈ ಮೂಲಕ ಹೊಸ ಆಟ ಆರಂಭಿಸಲಿದ್ದಾರೆ. ಡಬ್ಲ್ಯುಡಬ್ಲ್ಯುಇಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ವೀಕ್ಷಕರನ್ನು ಸೆಳೆಯಲು ಈ ನಡೆ ನೆರವಾಗುವ ನಿರೀಕ್ಷೆ ಇದೆ.

ರಿಯೋ ಒಲಿಂಪಿಕ್ಸ್ ಗೆ ಆಯ್ಕೆ ವಿಚಾರದಲ್ಲಿ ಭಾರತೀಯ ರೆಸ್ಲಿಂಗ್ ಒಕ್ಕೂಟದಿಂದ ನಿರ್ಲಕ್ಷ್ಯಕ್ಕೊಳಗಾದ ನಂತರ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಈ ಸಂಬಂಧ ಡಬ್ಲ್ಯುಡಬ್ಲ್ಯುಇ ಟ್ಯಾಲೆಂಟ್ ಡೆವಲಪ್ ಮೆಂಟ್ ಮುಖ್ಯಸ್ಥ ಕೆನ್ಯೊನ್ ಸಿಮನ್ ರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಡಬ್ಲ್ಯುಡಬ್ಲ್ಯುಇಗೆ ಸುಶೀಲ್ ಪಾದಾರ್ಪಣೆ ಮಾಡಿದರೆ ಮೊದಲ ಪಂದ್ಯದಲ್ಲಿ ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್ ಜಾನ್ ಸಿನಾ ಮತ್ತು ರೋಮನ್ ರೈನ್ಸ್ ರನ್ನು ಎದುರಿಸುವ ಸಾಧ್ಯತೆ ಇದೆ.

Comments are closed.