
ಕರಾಚಿ: ನಿವೃತ್ತಿ ಪಂದ್ಯದ ವಿಚಾರವಾಗಿ ತನ್ನನ್ನು ಟೀಕಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ವಿರುದ್ಧ ಟ್ವೀಟರ್‌ನಲ್ಲಿ ಹರಿಹಾಯ್ದಿದ್ದ ಸ್ಟಾರ್ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಭೂಗತ ದೊರೆ ದಾವೂದ್ ಇಬ್ರಾಹಿಂ ಅವರಿಂದ ಬೆದರಿಕೆ ಕರೆಗಳು ಬಂದಿವೆ ಎಂದು ‘ಎಬಿಪಿ ಲೈವ್’ ಹೇಳಿರುವುದಾಗಿ ‘ಇಂಡಿಯಾ ಟೈಮ್ಸ್’ ವರದಿ ಮಾಡಿದೆ.
‘‘ಹಣದಾಸೆಯಿಂದಾಗಿ ಅಫ್ರಿದಿ ಬೀಳ್ಕೊಡುಗೆ ಪಂದ್ಯಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಿಂದಿನಿಂದಲೂ ಆತನಿಗೆ ಹಣದ ಹುಚ್ಚಿದ್ದು, ಹಲವಾರು ಪಂದ್ಯಗಳನ್ನು ಹಣಕ್ಕಾಗಿ ಫಿಕ್ಸ್ ಮಾಡಿದ್ದ’’ ಎಂದು ಜಾವೇದ್ ಆರೋಪಿಸಿದ್ದರು.
ಜಾವೇದ್ ನೆಂಟನೂ ಆಗಿರುವ ದಾವೂದ್ ಇದೀಗ ಟೀಕೆಗಳನ್ನು ನಿಲ್ಲಿಸದೆ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.
Comments are closed.