ಕ್ರೀಡೆ

ಭಾರತದ ಆಕ್ರಮಣಕಾರಿ ಆಟ ಏಕದಿನ ಸರಣಿಯಲ್ಲೂ ಮುಂದುವರಿಯಲಿದೆ: ರಹಾನೆ

Pinterest LinkedIn Tumblr

rahaneಧರ್ಮಶಾಲ: ನ್ಯೂಜಿಲೆಂಡ್‌ ನಡುವಿನ ಟೆಸ್ಟ್‌ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿದ ಭಾರತ, ಏಕದಿನ ಸರಣಿಯಲ್ಲೂ ಆಕ್ರಮಣಕಾರಿ ಹೋರಾಟವನ್ನು ಮುಂದುವರಿಸುವುದು ಖಚಿತ ಎಂದು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಜ್ಯಿಂಕೆ ರಹಾನೆ ಅಭಿಪ್ರಾಯಪಟ್ಟರು.

ಇತ್ತೀಚೆಗಷ್ಟೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ 3–0 ಅಂತರದಿಂದ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿದೆ. ಭಾರತ ನ್ಯೂಜಿಲೆಂಡ್ ನಡುವೆ ಅಕ್ಟೋಬರ್‌ 16ರಿಂದ ಏಕದಿನ ಸರಣಿ ಆರಂಭವಾಗಲಿದೆ.

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಆಕ್ರಮಣಕಾರಿಯಾಗಿ ಪ್ರದರ್ಶನ ತೊರಿದ್ದರಿಂದಲ್ಲೇ ಸರಣಿ ಜಯಿಸಲು ಸಾಧ್ಯವಾಯಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ರಹಾನೆ ತಿಳಿಸಿದರು.

ಕ್ರಿಕೆಟ್‌ನ ವಿಭಿನ ಮಾದರಿ ಆಟಕ್ತಕೆ ತಕ್ಕಂತೆ ಏಕ ಕಾಲದಲ್ಲಿ ಆಟಗಾರರ ಹೊಂದಾಣಿಕೆ ಹೇಗೆ ಸಾಧ್ಯ? ಎಂಬ ಪ್ರಶ್ನೆಗೆ ಉತ್ತರಿಸಿದ ರಹಾನೆ, ‘ಯಾವುದೇ ಕ್ರಿಕೆಟ್‌ ಆಟವಾದರೂ ಅದು ವೃತ್ತಿಪರತೆಯಿಂದ ಕೂಡಿದ್ದಾಗಿದ್ದು, ಸಂದರ್ಭಕ್ಕೆ ತಕ್ಕಂತೆ ಆಡಲು ತಾನು ಮಾನಸಿಕವಾಗಿ ತಯಾರಿರುವುದಾಗಿ’ ಹೇಳಿದರು.

ಟೆಸ್ಟ್‌, ಏಕದಿನ, ಟ್ವಿ–20 ಈಗೇ ಯಾವುದೇ ಮಾದರಿಯ ಆಟವಾದರೂ ಆಟಗಾರ ಮಾನಸಿಕ ಸದೃಡ ನಿರ್ಧಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಹಾನೆ ತಮ್ಮ ಆನುಭವವನ್ನು ಹಂಚಿಕೊಂಡರು.

ಭಾರತ– ನ್ಯೂಜಿಲೆಂಡ್‌ ನಡುವಿನ ಏಕದಿನ ಸರಣಿಗೆ ಅನುಭವಿಗಳಾದ ಆರ್‌. ಅಶ್ವಿನ್‌, ಮಹಮದ್‌ ಶಮಿ, ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

Comments are closed.