ಕ್ರೀಡೆ

ಧೋನಿ ಪತ್ನಿ ಸಾಕ್ಷಿ ಸಿಂಗ್ ವಿರುದ್ಧ ಎಫ್ಐಆರ್ ದಾಖಲು

Pinterest LinkedIn Tumblr

sakshi-singh

ನವದೆಹಲಿ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಹಾಗೂ ಇತರೆ ಮೂವರ ವಿರುದ್ಧ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ.

ಕೋಟ್ಯಾಂತರ ರುಪಾಯಿ ವಚಿಸಿದ ಆರೋಪದ ಮೇಲೆ ಸಾಕ್ಷಿ ಸಿಂಗ್ ಧೋನಿ ಹಾಗೂ ಇತರೆ ಮೂವರ ವಿರುದ್ಧ ಡೆನಿಝ್ ಅರೋರಾ ಎಂಬುವವರು ದೂರು ನೀಡಿದ್ದು, ದೂರನ್ನು ಆಧರಸಿ ಪೊಲೀಸರು ಐಪಿಸಿ ಸೆಕ್ಷನ್ 420 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಿತಿ ಎಂಎಸ್ ಡಿ ಅಲ್ಮೊಡ್ ಪ್ರೈವೇಟ್ ಲಿ. ನಿರ್ದೇಶಕಿಯಾಗಿರುವ ಸಾಕ್ಷಿ ಧೋನಿ ಹಾಗೂ ಅರುಣ್ ಪಾಂಡೆ, ಶಭವತಿ ಪಾಂಡೆ ಮತ್ತು ಪ್ರತಿಮಾ ಪಾಂಡೆ ಸ್ಪೋರ್ಟ್ಸ್ ಫಿಟ್ ಸಂಸ್ಥೆಯಲ್ಲಿ ಷೇರು ಹೊಂದಿದ್ದು, ತನಗೆ ಕೊಡಬೇಕಾದ ಹಣ ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಪೋರ್ಟ್ಸ್ ಫಿಟ್ ನ ಸಹ ನಿರ್ದೇಶಕ ಅರೋರಾ ಆರೋಪಿಸಿದ್ದಾರೆ.

ಕಳೆ ಮಾರ್ಚ್ 31ರೊಳಗೆ ರಿತಿ ಸಾಕ್ಷಿ ಧೋನಿ ಸೇರಿದಂತೆ ರೀತಿ ಎಂಎಸ್ ಡಿ ಅಲ್ಮೊಡ್ ನಿರ್ದೇಶಕರು 11 ಕೋಟಿ ರುಪಾಯಿ ನೀಡಬೇಕಾಗಿತ್ತು. ಆದರೆ ಇದುವರೆಗೆ ಕೇವಲ 2.25 ಕೋಟಿ ಮಾತ್ರ ನೀಡಿದ್ದಾರೆ. ಬಾಕಿ ಹಣ ನೀಡದೆ ವಂಚಿಸುತ್ತಿದ್ದಾರೆ ಎಂದು ಅರೋರಾ ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಸಾಕ್ಷಿ ಧೋನಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಡೈಲಿ ಬಾಸ್ಕರ್.ಕಾಮ್ ವರದಿ ಮಾಡಿದೆ.

Comments are closed.