ಕ್ರೀಡೆ

14 ತಿಂಗಳ ಪುತ್ರಿ ಐಸಿಯುನಲ್ಲಿದ್ದರೂ ನ್ಯೂಜಿಲೆಂಡ್ ತಂಡದ ವಿರುದ್ಧ ಆಡಿ ಗೆಲುವು ತಂದುಕೊಟ್ಟ ಶಮಿ!

Pinterest LinkedIn Tumblr

shami-daughter

ನವದೆಹಲಿ: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಕೋಲ್ಕತ ಟೆಸ್ಟ್ನಲ್ಲಿ ಭಾರತ ತಂಡದ 178 ರನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ವೇಗಿ ಮೊಹಮದ್ ಶಮಿ. 14 ತಿಂಗಳ ಪುತ್ರಿ ಆಯಿರಾ, ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಐಸಿಯುನಲ್ಲಿದ್ದರೂ, ಅದರ ನಡುವೆಯೂ ಟೆಸ್ಟ್ ತಂಡದ ಪರ ಆಟ ಮುಂದುವರಿಸುವ ಮೂಲಕ ರಾಷ್ಟ್ರೀಯ ತಂಡದ ಪರ ತಮಗಿರುವ ಬದ್ಧತೆಯನ್ನು ತೋರಿಸಿದ್ದಾರೆ.

ಎರಡೂ ಇನಿಂಗ್ಸ್ಗಳಲ್ಲಿ ತಲಾ ಮೂರು ವಿಕೆಟ್ ಉರುಳಿಸಿದ್ದ ಶಮಿ, ಭಾರತ ತಂಡದ ಟೆಸ್ಟ್ ಸರಣಿ ಗೆಲುವಿನೊಂದಿಗೆ ವಿಶ್ವ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರುವಲ್ಲಿ ನೆರವಾಗಿದ್ದರು. ಕೋಲ್ಕತ ಟೆಸ್ಟ್ನ 2ನೇ ದಿನದ ವೇಳೆ, ಅಯಿರಾಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿದ್ದರಿಂದ ಕೋಲ್ಕತದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಈ ವಿಚಾರವನ್ನು 2ನೇ ದಿನದಾಟದ ಮುಕ್ತಾಯದ ಬಳಿಕ ಶಮಿಗೆ ತಿಳಿಸಲಾಗಿತ್ತು.

ಮುಂದಿನ 2 ದಿನಗಳ ಕಾಲ ಶಮಿ ಬಹಳ ಒತ್ತಡದಿಂದಲೇ ಬೌಲಿಂಗ್ ಮಾಡಿದ್ದರು. 2 ಹಾಗೂ 3ನೇ ದಿನದಾಟದ ಮುಕ್ತಾಯದ ಬಳಿಕ ಆಸ್ಪತ್ರೆಗೆ ತೆರಳುತ್ತಿದ್ದ ಶಮಿ, ಮಗಳನ್ನು ನೋಡಿಕೊಂಡು ರಾತ್ರಿ ಟೀಮ್ ಹೋಟೆಲ್ಗೆ ವಾಪಸಾಗುತ್ತಿದ್ದರು. ಕೋಲ್ಕತದಲ್ಲಿ ಪಂದ್ಯ ಗೆಲ್ಲುವ ಹೊತ್ತಿಗೆ ಚೇತರಿಸಿಕೊಂಡಿದ್ದ ಅಯಿರಾ ಡಿಸ್ಚಾರ್ಜ್ ಆಗಿದ್ದರು.

Comments are closed.