ಕ್ರೀಡೆ

ಮನೆಮದ್ದು: ತೊಂಡೆ ಕಾಯಿಯ ಕರಾಮತ್ತು

Pinterest LinkedIn Tumblr

tonde

– ಡಾ. ಸುಚೇತಾ ಜಯರಾಮ್

* ಏನಾದರೂ ಹುಳು ಕಚ್ಚಿ ಆ ಜಾಗದಲ್ಲಿ ಗಂದೆಯಾಗಿದ್ದರೆ ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ಹಚ್ಚಿ.

* ತೊಂಡೆಕಾಯಿಯ ಎಲೆಗಳ ರಸ 5 ಚಮಚಕ್ಕೆ 1 ಲೋಟ ನೀರು ಹಾಕಿ ಕುದಿಸಿ ಆರಿಸಿ ಸೇವಿಸಿದರೆ ದೇಹದ ಉಷ್ಣತೆ ಮತ್ತು ಕಣ್ಣುರಿ ಕಡಿಮೆಯಾಗುತ್ತದೆ.

* ಚರ್ಮ ಒಣಗಿದ್ದರೆ ತೊಂಡೆಕಾಯಿಯ ಹಸಿ ಹಣ್ಣನ್ನು ದಿನಕ್ಕೆ 2 ರಂತೆ ಸೇವಿಸಿದರೆ ಚರ್ಮ ಮೃದುವಾಗುತ್ತದೆ.

* 1 ಲೋಟ ಎಲೆಯ ರಸವನ್ನು 1ಲೋಟ ಎಳ್ಳೆಣ್ಣೆ ಜತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಕಾಯಿಲೆ ಮತ್ತು ಸೋರಿಯಾಸಿಸ್‌ಗೆ ಹಚ್ಚಿ.

* 2 ಚಮಚ ಎಲೆಯ ರಸವನ್ನು 1/2 ಬಟ್ಟಲು ಮೊಸರಿನ ಜತೆ ದಿನಕ್ಕೆ 2 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ.

* ಎಳೆಯ ತೊಂಡೆ ಹಣ್ಣನ್ನು ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

Write A Comment