ಕ್ರೀಡೆ

ಭಾರತಕ್ಕೆ ಕ್ಲೀನ್ ಸ್ವೀಪ್ ಚಿತ್ತ: ಇಂದು ಶ್ರೀಲಂಕಾ ವಿರುದ್ಧದ ನಾಲ್ಕನೆ ಏಕದಿನ ಪಂದ್ಯ

Pinterest LinkedIn Tumblr

DENCAM

ಕೋಲ್ಕತಾ, ನ.12: ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಗುರುವಾರ 150ನೆ ವರ್ಷಾಚರಣೆಯ ಸಂಭ್ರಮದಲ್ಲಿರುವ ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಾಲ್ಕನೆ ಏಕದಿನ ಪಂದ್ಯದಲ್ಲಿ ಲಂಕಾವನ್ನು ಎದುರಿಸಲಿದ್ದು, ಕ್ಲೀನ್ ಸ್ವೀಪ್ ಮಾಡಲು ಟೀಮ್ ಇಂಡಿಯಾ ತಯಾರಿ ನಡೆಸಿದೆ.
ಹಂಗಾಮಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸರಣಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಭಾರತಕ್ಕೆ ಹೆಚ್ಚಿನ ಒತ್ತಡವಿಲ್ಲ. ಇದರಿಂದಾಗಿ ಭಾರತ ತಂಡ ಈ ಪಂದ್ಯದಲ್ಲಿ ಕೆಲವು ಬದಲಾವಣೆಯೊಂದಿಗೆ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ರೋಹಿತ್ ಶರ್ಮ ಮತ್ತು ರಾಬಿನ್ ಉತ್ತಪ್ಪ ಅಂತಿಮ ಹನ್ನೊಂದರ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ನಾಯಕ ಧೋನಿ ಕೈ ಬೆರಳಿಗೆ ಆಗಿರುವ ಗಾಯದ ಕಾರಣದಿಂದಾಗಿ ಸರಣಿಯಲ್ಲಿ ಉಳಿದಿರುವ ಅಂತಿಮ ಎರಡು ಪಂದ್ಯಗಳಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ರಾಬಿನ್ ಉತ್ತಪ್ಪ ಅವಕಾಶ ಪಡೆಯಲಿದ್ದಾರೆ. ವೇಗಿ ಇಶಾಂತ್ ಶರ್ಮಗೆ ವಿಶ್ರಾಂತಿ ನೀಡಲಾಗುವುದು. ಅವರ ಬದಲಿಗೆ ವಿನಯ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಧವಳ್ ಕುಲಕರ್ಣಿ, ಉಮೇಶ್ ಯಾದವ್ ಮತ್ತು ವಿನಯ್ ಕುಮಾರ್ ಭಾರತದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ಅಮಿತ್ ಶರ್ಮಗೆ ವಿಶ್ರಾಂತಿ ನೀಡಲಾಗುವುದು ಎಂದು ನಾಯಕ ಕೊಹ್ಲಿ ಹೇಳಿದ್ದಾರೆ. ಕರಣ್ ಶರ್ಮ ಅವಕಾಶ ಪಡೆಯಲಿದ್ದಾರೆ.
ಸತತ ಮೂರು ಪಂದ್ಯಗಳಲ್ಲಿ ಸೋತು ಸರಣಿ ಕಳೆದು ಕೊಂಡಿರುವ ಶ್ರೀಲಂಕಾ ತಂಡ ಸರಣಿಯಲ್ಲಿ ಉಳಿದಿರುವ ಇನ್ನರೆಡು ಪಂದ್ಯಗಳಲ್ಲಿ ಚೆನ್ನಾಗಿ ಪ್ರದರ್ಶನ ನೀಡಲು ತಂಡ ದಲ್ಲಿ ಕೆಲವು ಆಟಗಾರರ ಬದಲಾವಣೆಗೆ ಯೋಚಿಸುತ್ತಿದೆ. ವಿಶ್ವಕಪ್‌ನ ಹಿತದೃಷ್ಟಿಯಿಂದ ಲಂಕಾ ತಂಡ ಕೆಲವು ಬದಲಾವಣೆಯೊಂದಿಗೆ ಉಳಿದ ಪಂದ್ಯಗಳಲ್ಲಿ ತನ್ನ ಪ್ರಯೋಗವನ್ನು ಮುಂದುವರಿಸಲಿದೆ.

ವೇಗಿ ಧಮ್ಮಿಕ ಪ್ರಸಾದ್, ಸ್ಪಿನ್ನರ್ ಸೂರಜ್ ರಣದೀವ್, ಉಪುಲ್ ತರಣಗ ಮತ್ತು ಕುಮಾರ್ ಸಂಗಕ್ಕರ ಇವರ ಬದಲಿಗೆ ಶಮಿಂದ ಈರಂಗ, ಲಹಿರು ತಿರಿಮನ್ನೆ, ದಿನೇಶ್ ಚಾಂಡಿಮಾಲ್ ಮತ್ತು ಅಜಂತ ಮೆಂಡಿಸ್‌ಗೆ ಅವಕಾಶ ನೀಡಲು ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಯೋಚಿಸುತ್ತಿ ದ್ದಾರೆ. ಶ್ರೀಲಂಕಾದ ತಂಡ ಮಧ್ಯಮ ಸರದಿ ದುರ್ಬಲ ವಾಗಿದೆ. ಮಹೇಲ ಜಯವರ್ಧನೆ ಮತ್ತು ನಾಯಕ ಅ್ಯಂಜೆಲೊ ಮ್ಯಾಥ್ಯೂಸ್ ಅವರನ್ನು ಹೊರತುಪಡಿಸಿದರೆ ತಂಡದ ಸಹ ಆಟಗಾರರು ವಿಫಲರಾಗಿದ್ದಾರೆ. ಈ ಕಾರಣದಿಂದಾಗಿ ತಿರಿಮನ್ನೆ ಮತ್ತು ಚಾಂಡಿಮಾಲ್‌ನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಶಮಿಂದ ಈರಂಗ ಅವರು ವೇಗದ ಬೌಲಿಂಗ್ ದಾಳಿಯನ್ನು ಆರಂಭಿಸಲಿದ್ದಾರೆ.

http://vbnewsonline.com

Write A Comment