ಮನೋರಂಜನೆ

47ನೇ ವಸಂತಕ್ಕೆ ಕಾಲಿಟ್ಟ ಕಾಜೋಲ್‍ಗೆ ವಿಶ್ ಮಾಡಲು ಅಭಿಮಾನಿಯೊಬ್ಬರು ತಂದಿದ್ದ ಕೇಕ್; ತಿನ್ನಲು ನಿರಾಕರಿಸಿದ ನಟಿಯ ವೀಡಿಯೊ ವೈರಲ್

Pinterest LinkedIn Tumblr

ಮುಂಬೈ: ಬಾಲಿವುಡ್ ನಟಿ ಕಾಜೋಲ್ ಗುರುವಾರ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟ ಕಾಜೋಲ್‍ಗೆ ವಿಶ್ ಮಾಡಲು ಅಭಿಮಾನಿಯೊಬ್ಬರು ತಂದಿದ್ದ ಕೇಕ್ ತಿನ್ನಲು ನಿರಾಕರಿಸಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಾಜಲ್ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆಗಸ್ಟ್ 5 ರಂದು ಕಾಜೋಲ್ ಹುಟ್ಟುಹಬ್ಬದ ಪ್ರಯುಕ್ತ ಹಲವಾರು ಅಭಿಮಾನಿಗಳು ಕಾಜೋಲ್ ಮನೆ ಮುಂದೆ ಕೇಕ್ ಹಿಡಿದು ನಿಂತ ಕಾಯುತ್ತಿರುತ್ತಾರೆ. ಈ ವೇಳೆ ಕಾಜೋಲ್ ತಮ್ಮ ಬಾಡಿಗಾಡ್ರ್ಸ್ ಜೊತೆಗೆ ಹೊರಗೆ ಬಂದು ಕೇಕ್ ಕತ್ತರಿಸುತ್ತಾರೆ.

ವೀಡಿಯೋದಲ್ಲಿ ಕಾಜಲ್ ಅಭಿಮಾನಿಯೊಬ್ಬರು ಕೇಕ್ ತಂದು ಬರ್ತ್‍ಡೇ ಸಾಂಗ್ ಹೇಳಿ ವಿಶ್ ಮಾಡುತ್ತಾರೆ. ಈ ವೇಳೆ ಕೇಕ್ ಕತ್ತರಿಸಿ ಮನೆಯೊಳಗೆ ಹೋಗಿಬಿಡುತ್ತಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳಲ್ಲೊಬ್ಬರು ಒಂದು ಪೀಸ್ ಕೇಕ್ ನೀಡುತ್ತಾರೆ. ಆದರೆ ಕಾಜಲ್ ಅದನ್ನು ಸ್ವೀಕರಿಸದೇ ಬೇಡ ಎಂದು ನಿರಾಕರಿಸುವುದನ್ನು ಕಾಣಬಹುದಾಗಿದೆ. ಕಾಜಲ್‍ರ ಈ ವರ್ತನೆ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಲವರು ಕಾಜೋಲ್‍ಗೆ ದುರಹಂಕಾರ ಎಂದು ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ನಿಮ್ಮ ಸಮಯ, ಹಣ ಮತ್ತು ಶ್ರಮವನ್ನು ಏಕೆ ವ್ಯರ್ಥಮಾಡಿಕೊಳ್ಳುತ್ತೀರಾ? ಇವರ ಬದಲಾಗಿ ಅನಾಥ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸುವುದು ಉತ್ತಮ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Comments are closed.