ಮನೋರಂಜನೆ

ಬಿಗ್ ಬಾಸ್ ಗೆದ್ದು ಬನ್ನಿ: ಮಂಜು ಪಾವಗಡಗೆ ಶುಭ ಹಾರೈಸಿದ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​

Pinterest LinkedIn Tumblr

ಬಿಗ್ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆಗೆ ಇನ್ನು ಎರಡು ದಿನ ಬಾಕಿ ಇದೆ. ಬಿಗ್ ಬಾಸ್​ ಮನೆಯಲ್ಲಿ ಈಗ ಕೇವಲ ಐದು ಮಂದಿ ಉಳಿದಿದ್ದಾರೆ. 2 ಲಕ್ಷ ಗೆಲ್ಲುವ ಟಾಸ್ಕ್​ ಇನ್ನು ಮುಂದುವರೆಯುತ್ತಿದ್ದು, ಐದೂ ಸ್ಪರ್ಧಿಗಳು ಟಾಸ್ಕ್​ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಟಾಸ್ಕ್​ನಲ್ಲಿ ಗೆದ್ದು ಯಾರು ಈ ವಾರಾಂತ್ಯದಲ್ಲಿ ಎರಡು ಲಕ್ಷ ಗಳಿಸುತ್ತಾರೆ ಅಂತ ವೀಕ್ಷಕರು ಕಾಯುತ್ತಿದ್ದಾರೆ. ಇನ್ನು, ಮನೆಯಲ್ಲಿ ಎಷ್ಟೇ ಜನರಿದ್ದರೂ ಮಂಜು ಪಾವಗಡ ಅವರ ತಮಾಷೆ ಹಾಗೂ ಹಾಸ್ಯಕ್ಕೆ ಮಾತ್ರ ಬ್ರೇಕ್ ಬೀಳೋದಿಲ್ಲ. ತಮ್ಮ ಜೋಕ್ಸ್​ಗಳಿಂದ ಬಿಗ್ ಬಾಸ್​ ಮನೆಯಲ್ಲಿ ನಗುವಿನ ಹೊಳೆ ಹರಿಸುವ ಮಂಜು ಅವರಿಗೆ ಈಗ ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅವರ ಬೆಂಬಲವೂ ಸಿಕ್ಕಿದೆ. ಅದ್ಕಕೆ ಶಿವಣ್ಣನ ಕಡೆಯಿಂದ ಮಂಜು ಪಾವಗಡ ಅವರಿಗಾಗಿ ಉಡುಗೊರೆಯೊಂದು ಬಿಗ್ ಬಾಸ್​ ಮನೆ ತಲುಪಿದೆ.

ಬಿಗ್ ಬಾಸ್​ ಮನೆಯಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿರುವ ಮಂಜು ಪಾವಗಡ ಅವರಿಗೆ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್ ಸಹ ಇದೆ. ಫಿನಾಲೆ ತಲುಪಿರುವ ಸ್ಪರ್ಧಿಗಳಲ್ಲಿ ಮಂಜು ಪಾವಗಡ ಸಹ ಒಬ್ಬರು. ಮಂಜು ಪರವಾಗಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳೂ ಸಹ ವೋಟ್​ ಮಾಡುವಂತೆ ಕೋರುತ್ತಿದ್ದಾರೆ.

ಇನ್ನು ಬಿಗ್ ಬಾಸ್​ ಮನೆಯಲ್ಲಿ ಮಂಜು ಅವರ ಈಡೇರದ ಆಸೆ ಒಂದು ಇದೆ. ಆ ಆಸೆಯನ್ನು ಮಂಜು ಪಾವಗಡ ಅವರು ಕಿವಿ ಮಾತಿನ ಮೂಲಕ ಬಿಗ್ ಬಾಸ್​ಗೆ ತಲುಪಿಸಿದ್ದರು. ಮಂಜು ಕೇಳಿದ್ದ ಆಸೆ ಈಗ ಈಡೇರಿದೆ.

ಮಂಜು ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಂದರೆ ತುಂಬಾ ಇಷ್ಟವಂತೆ. ನೆಚ್ಚಿನ ನಟನ ಬಳಿಯಿಂದ ವಿಶ್​ ಮಾಡಿಸಿ ಎಂದು ಕೇಳಿದ್ದರು. ಅದಕ್ಕೆ ಬಿಗ್​ ಬಾಸ್​ ಅವರು ಶಿವಣ್ಣನ ಕಡೆಯಿಂದ ವಿಶ್​ ಮಾಡಿಸಿದ್ದಾರೆ. ಶಿವರಾಜ್​ ಕುಮಾರ್​ ಅವರು ಮಂಜು ಅವರಿಗೆ ಫಿನಾಲೆಗೆ ಕಾಲಿಟ್ಟಿದ್ದಕ್ಕೆ ಶುಭ ಕೋರಿದ್ದಾರೆ. ಜೊತೆಗೆ ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ.

ಶಿವಣ್ಣನ ಕಡೆಯಿಂದ ವಿಶೇಷ ಸಂದೇಶ ಬರುತ್ತಿದ್ದಂತೆಯೇ ಮಂಜು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅವರ ಈ ಆಸೆ ಈಡೇರುತ್ತೋ ಇಲ್ಲವೋ ಅಂತ ಅನಿಸಿತ್ತಂತೆ. ಇದು ಅವರ ಜೀವನದಲ್ಲಿ ಮರೆಯಲಾದ ಕ್ಷಣವಾಗಿದೆಯಂತೆ. ಇನ್ನು ಶಿವಣ್ಣನ ಈ ವಿಡಿಯೋದಿಂದಾಗಿ ಮಂಜು ಫಿನಾಲೆಯಲ್ಲಿ ಗೆಲುವಿನ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದೂ ಅಂದಾಜಿಸಲಾಗುತ್ತಿದೆ.

ಮಂಜು ಅವರ ಪರ ಅವರ ಆತ್ಮೀಯ ಸ್ನೇಹಿತೆ ದಿವ್ಯಾ ಸುರೇಶ್​ ಅವರೂ ಸಹ ಮತ ಯಾಚನೆ ಮಾಡುತ್ತಿದ್ದಾರೆ. ಈ ಸೀಸನ್​ನ ಕೊನೆಯ ಎಲಿಮಿನೇಷ್​ನ್​ ಮೂಲಕ ಮನೆಯಿಂದ ಹೊರ ಹೋದ ದಿವ್ಯಾ ಸುರೇಶ್​ ಅವರು ತನ್ನ ಬೆಸ್ಟ್​ ಫ್ರೆಂಡ್​ ಅನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಬಿಗ್ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆ ಭಾನುವಾರದಂದು ನಡೆಯಲಿದೆ. ಶನಿವಾರ ಹಾಗೂ ಭಾನುವಾರದ ಸಂಚಿಕೆಗಳು ಸಂಜೆ 6ಕ್ಕೆ ಪ್ರಸಾರವಾಗಲಿವೆ. ಬದಲಾದ ಸಮಯದಲ್ಲಿ ಪ್ರಸಾರವಾಗಲಿರುವ ಸಂಚಿಕೆ ಹಾಗೂ ಬಿಗ್​ ಬಾಸ್​ ವಿನ್ನರ್​ ಯಾರೆಂದು ತಿಳಿಯಲು ವೀಕ್ಷಕರು ಕಾತರರಾಗಿದ್ದಾರೆ. ಈ ಸಂಚಿಕೆಗಳಲ್ಲಿ ಬಿಗ್ ಬಾಸ್​ ಮನೆಯಿಂದ ಹೊರ ಹೋಗಿರುವ ಎಲ್ಲ ಸ್ಪರ್ಧಿಗಳನ್ನು ನೋಡಬಹುದಾಗಿದೆ. ಇದರ ಜೊತೆಗೆ ಈ ಸಲದ ವಿನ್ನರ್​ ಯಾರು ಆಗಲಿದ್ದಾರೆ ಅನ್ನೋ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ.

Comments are closed.