
ಕೆಲವು ದಿನಗಳ ಹಿಂದಷ್ಟೇ, 1975ರ ಎಮರ್ಜೆನ್ಸಿ ಕುರಿತು ಒಂದು ಸಿನಿಮಾ ನಿರ್ದೇಶಿಸುವುದಾಗಿ ಕಂಗನಾ ಘೋಷಿಸಿದ್ದರು. ಇದರ ಹಿಂದೆಯೇ, ಸಾಕಷ್ಟು ಟೀಕೆಗಳು ಕೇಳಿ ಬಂದವು. ಬಾಲಿವುಡ್ನ ಸ್ವಯಂಘೋಷಿತ ನಂಬರ್ ಒನ್ ವಿಮರ್ಶಕರಾಗಿರುವ ಕಮಾಲ್ ಆರ್ ಖಾನ್, ಈ ಚಿತ್ರವು ಸೂಪರ್ ಫ್ಲಾಪ್ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಕೆಆರ್ಕೆ ಅಷ್ಟೆಲ್ಲ ಮಾತಾಡಿದರೂ ಸುಮ್ಮನಿದ್ದ ಕಂಗನಾ, ಈಗ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಅವರು, ‘ನಾನು ಯಾವಾಗೆಲ್ಲ ಹೊಸ ಚಿತ್ರಗಳನ್ನು ಘೋಷಿಸುತ್ತೇನೋ, ಕೆಲವರಿಗೆ ನಿದ್ದೆ ಬರುವುದಿಲ್ಲ. ಸುಮ್ಮನೆ ಇಲ್ಲಸಲ್ಲದ್ದನ್ನು ಹೇಳುತ್ತಿರುತ್ತಾರೆ. ‘ಮಣಿಕರ್ಣಿಕಾ’ ಚಿತ್ರ ಫ್ಲಾಪ್ ಎಂದರು. ಆದರೆ, ಅದು 150 ಕೋಟಿ ರೂ ಬಿಜಿನೆಸ್ ಮಾಡಿತು. ನನಗೆ ಅವಕಾಶಗಳಿಲ್ಲ ಎಂದರು. ಅವರೇ ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ಹೀಗೆ ಸುಳ್ಳು ಸುದ್ದಿ ಹಬ್ಬಿಸುವವರು ಹುಳಗಳಿಗಿಂತ ಕಡೆ. ನಾನು ಯಶಸ್ವಿ ನಟಿಯಾಗಿದ್ದರೂ, ನನ್ನ ಬಗ್ಗೆ ಹಲವು ದಿನಗಳಿಂದ ಸತತವಾಗಿ ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಇನ್ನು ನಾನು ಸುಮ್ಮನೆ ಕೂರುವುದಿಲ್ಲ. ಎಲ್ಲರ ಬಂಡವಾಳವನ್ನೂ ಬಯಲು ಮಾಡುತ್ತೇನೆ. ನನ್ನ ಮೇಲೆ 100 ಕೇಸ್ಗಳನ್ನು ಹಾಕಿದರೂ, ನಾನು ಬಗ್ಗುವುದಿಲ್ಲ. ಹೋರಾಟ ಮುಂದುವರೆಸುತ್ತೇನೆ. ಇದು ನನ್ನ ಕೊನೆಯ ಎಚ್ಚರಿಕೆ, ಹುಷಾರ್ …’ ಎಂದು ಎಚ್ಚರಿಸಿದ್ದಾರೆ.
Comments are closed.