ಮನೋರಂಜನೆ

66 ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರಧಾನ : ‘ಥಪ್ಪಡ್’ಗೆ ಏಳು ಪ್ರಶಸ್ತಿ, ಅತ್ಯುತ್ತಮ ನಟ ಪ್ರಶಸ್ತಿ ಇರ್ಫಾನ್ ಖಾನ್ – ತಾಪ್ಸೀ ಪನ್ನು ಅತ್ಯುತ್ತಮ ನಟಿ ಪ್ರಶಸ್ತಿ

Pinterest LinkedIn Tumblr

ನವದೆಹಲಿ: ಶನಿವಾರ ನಡೆದ 66 ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರಧಾನ ಸಮಾರಂಬದಲ್ಲಿ ಅನುಭವ್ ಸಿನ್ಹಾ ಅವರ ‘ಥಪ್ಪಡ್ ‘ ಏಳು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಅತಿ ಹೆಚ್ಚು ಪ್ರಶಸ್ತಿ ಗಳಿಸಿದ ಸಿನಿಮಾ ಎನಿಸಿದೆ. ಆ ನಂತರದ ಸ್ಥಾನದಲ್ಲಿ ಬಿಗ್ ಬಿ ನಟನೆಯ ‘ಗುಲಾಬೊ ಸಿತಾಬೊ’ ಇದ್ದು ಈ ಸಿನಿಮಾ ಆರು ಪ್ರಶಸ್ತಿಗಳನ್ನು ಗಳಿಸಿತು.

ಮುಂಬೈನ ಗೋರೆಗಾಂವ್ ಫಿಲ್ಮ್‌ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ದಿವಂಗತ ನಟ ಇರ್ಫಾನ್ ಖಾನ್ ಅತ್ಯುತ್ತಮ ನಟ ಪ್ರಶಸ್ತಿ(‘ಆಂಗ್ರೆಜಿ ಮೀಡಿಯಂ’) ಮತ್ತು ಜೀವಮಾನ ಸಾಧನೆ ಪ್ರಶಸ್ತಿ ಗಳಿಸಿಕೊಂಡರು.

ಹಿರಿಯ ನಟ ಅಮಿತಾಬ್ ಬಚ್ಚನ್ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.

ತಾಪ್ಸೀ ಪನ್ನು ಮತ್ತು ತಿಲೋತ್ತಮ ಶೋಮೆ ಕ್ರಮವಾಗಿ ಅತ್ಯುತ್ತಮ ನಾಯಕಿ ನಟಿ ಹಾಗೂ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಫಿಲ್ಮ್‌ಫೇರ್ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

ಅತ್ಯುತ್ತಮ ಚಿತ್ರ: ಥಪ್ಪಡ್
ವಿಮರ್ಶಕರ ಅತ್ಯುತ್ತಮ ಚಿತ್ರ: ಪ್ರತೀಕ್ ವಾಟ್ಸ್
ಅತ್ಯುತ್ತಮ ನಟ: ಇರ್ಫಾನ್ ಖಾನ್ (ಅಂಗ್ರೇಜಿ ಮೀಡಿಯಂ)
ಅತ್ಯುತ್ತಮ ನಟಿ: ತಾಪ್ಸಿ ಪನ್ನು (ಥಪ್ಪಡ್)
ವಿಮರ್ಶಕರ ಅತ್ಯುತ್ತಮ ನಟ: ಅಮಿತಾಬ್ ಬಚ್ಚನ್(ಗುಲಾಬೋ ಸಿತಾಬೊ)
ವಿಮರ್ಶಕರ ಅತ್ಯುತ್ತಮ ನಟಿ ತಿಲೋತ್ತಮ ಶೋಮೆ (ಸರ್)
ಅತ್ಯುತ್ತಮ ಪೋಷಕ ನಟ: ಸೈಫ್ ಅಲಿ ಖಾನ್ (ದಿ ಅನ್‌ಸಂ ಗ್ ವಾರಿಯರ್)
ಅತ್ಯುತ್ತಮ ಪೋಷಕ ನಟಿ: ಫರ್ರೊಕ್ ಜಾಫರ್ (ಗುಲಾಬೊ ಸಿತಾಬೊ)
ಅತ್ಯುತ್ತಮ ನಿರ್ದೇಶಕ: ಓಂ ರಾವುತ್ (ತನ್ಹಾಜಿ: ದಿ ಅನ್‌ಸಂಗ್ ವಾರಿಯರ್)
ಅತ್ಯುತ್ತಮ ಕಥೆ: ಅನುಭವ್ ಸುಶೀ; ಸಿನ್ಹಾ & ಮೃನ್ಮಯಿ ಲಗೂ ವೈಕುಲ್ (ಥಪ್ಪಡ್)
ಅತ್ಯುತ್ತಮ ಚಿತ್ರಕಥೆ: ರೊಹೆನಾ ಗೆರಾ (ಸರ್)
ಅತ್ಯುತ್ತಮ ಸಂಭಾಷಣೆ: ಜುಹಿ ಚತುರ್ವೇದಿ (ಗುಲಾಬೊ ಸಿತಾಬೊ)
ಅತ್ಯುತ್ತಮ ಚೊಚ್ಚಲ ನಿರ್ದೇಶನ: ರಾಜೇಶ್ ಕೃಷ್ಣನ್ (ಲೂಟ್‌ಕೇಸ್)
ಅತ್ಯುತ್ತಮ ಚೊಚ್ಚಲ ನಟಿ: ಅಲಾಯಾ ಎಫ್ (ಜವಾನಿ ಜಾನೇಮನ್)
ಅತ್ಯುತ್ತಮ ಮ್ಯೂಸಿಕ್ ಆಲ್ಬಮ್: ಪ್ರಿತಂ-ಲುಡೋ
ಅತ್ಯುತ್ತಮ ಸಾಹಿತ್ಯ: ಗುಲ್ಝರ್ (ಛಾಪಕ್)’
ಅತ್ಯುತ್ತಮ ಹಿನ್ನೆಲೆ ಗಾಯಕಿ: ಅಸೀಸ್ ಕೌರ್ (ಮಲಂಗ್)
ಅತ್ಯುತ್ತಮ ಹಿನ್ನೆಲೆ ಗಾಯಕ: ರಾಘವ್ ಚೈತನ್ಯ (ಏಕ್ ತುಕ್ಡಾ ಧೂಪ್ , ಥಪ್ಪಡ್)
ಅತ್ಯುತ್ತಮ ಸಾಹಸ: ರಮ್‌ಜಾನ್ ಬುಲುತ್, ಆರ್‌ಪಿ ಯಾದವ್ (ತನ್ಹಾಜಿ: ದಿ ಅನ್‌ಸಂಗ್ ವಾರಿಯರ್)
ಅತ್ಯುತ್ತಮ ಸಿನಿಮಾಟೋಗ್ರಫಿ: ಅವಿಕ್ ಮುಖೋಪಾಧ್ಯಾಯ್ (ಗುಲಾಬೊ ಸಿತಾಬೊ)
ಅತ್ಯುತ್ತಮ ಕೊರಿಯೋಗ್ರಫಿ: ಫರಾಹ್ ಖಾನ್ (ದಿಲ್ ಬೆಚಾರಾ)
ಜೀವಮಾನ ಸಾಧನೆ ಪ್ರಶಸ್ತಿ: ಇರ್ಫಾನ್ ಕಾನ್

Comments are closed.