ಮನೋರಂಜನೆ

67 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಕಂಗನಾ ‘ಅತ್ಯುತ್ತಮ ನಟಿ’, ಧನುಶ್, ಮನೋಜ್ ಬಾಜ್‍ಪೇಯಿ ‘ಅತ್ಯುತ್ತಮ ನಟ’ ಪ್ರಶಸ್ತಿ

Pinterest LinkedIn Tumblr

ನವದೆಹಲಿ: 67 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು ನಿತೀಶ್ ತಿವಾರಿ ನಿರ್ದೇಶನದ ಹಿಂದಿಯ ಚಿಚೊರೇ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ.

2019ರಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ‘ಮಣಿಕರ್ಣಿಕಾ’ ಮತ್ತು ‘ಪಂಗಾ’ ಸಿನಿಮಾದ ನಟನೆಗಾಗಿ ಕಂಗನಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದರೆ ‘ಭೋಂಸ್ಲೆ’ ಸಿನಿಮಾಕ್ಕೆ ಮನೋಜ್ ಬಾಜ್‍ಪೇಯಿ ಮತ್ತು ‘ಅಸುರನ್’ ಸಿನಿಮಾಕ್ಕೆ ಧನುಷ್‍ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.

ಮನೋಜ್ ಕುಮಾರ್ ನಿರ್ದೇಶನದ ‘ಅಕ್ಷಿ’ಗೆ ಕನ್ನಡ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ. ತುಳು ಭಾಷೆಯಲ್ಲಿ ಪ್ರೀತಂ ಶೆಟ್ಟಿ ನಿರ್ದೇಶನದ ‘ಪಿಂಗಾರ’ ಸಿನಿಮಾಗೆ ಸಿಕ್ಕಿದೆ.

ಸಿನಿಮಾಗೆ ಸಂಬಂಧಿಸಿದ ಪುಸ್ತಕ ವಿಭಾಗದಲ್ಲಿ ಪಿ.ಆರ್. ರಾಮದಾಸ್ ನಾಯ್ಡು ಅವರು ಕನ್ನಡದಲ್ಲಿ ಬರೆದ ‘ಜಾಗತಿಕ ಸಿನಿಮಾ ವಿಕಾಸ-ಪ್ರಭಾವ’ ಕೃತಿಗೆ ಲಭಿಸಿದೆ.

ಫೀಚರ್-ಅಲ್ಲದ ಚಲನಚಿತ್ರಗಳಿಗಾಗಿ ಅತ್ಯುತ್ತಮ ನಿರೂಪಣೆ ಪ್ರಶಸ್ತಿ ಸರ್ ಡೇವಿಡ್ ಅಟೆನ್‍ಬರೋ ಅವರ ‘ವೈಲ್ಡ್ ಕರ್ನಾಟಕ’ಕ್ಕೆ (ಇಂಗ್ಲಿಷ್) ಸಿಕ್ಕಿದೆ.

ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ: ಎ ಗಾಂಧಿಯನ್ ಅಫೇರ್: ಇಂಡಿಯಾಸ್‌ ಕ್ಯೂರಿಯಸ್‌ ಪೋರ್ಟ್ರಯಲ್ ಆಫ್ ಲವ್ ಇನ್ ಸಿನಿಮಾ- ಸಂಜಯ್ ಸೂರಿ
(ವಿಶೇಷ ಮನ್ನಣೆ: ಸಿನಿಮಾ ಪಹರಣ ಮನುಸ್- ಅಶೋಕ್ ರಾಣೆ ಮತ್ತು ಕನ್ನಡ ಸಿನಿಮಾ: ಜಾಗತಿಕ ಸಿನಿಮಾ ವಿಕಾಸ-ಪ್ರೇರಣೆ ಪ್ರಭಾವ- ಪಿ.ಆರ್. ರಾಮದಾಸ ನಾಯ್ಡು)
ಅತ್ಯುತ್ತಮ ಸಿನಿಮಾ ವಿರ್ಮಶಕರು: ಸೊಹಿನಿ ಚಟ್ಟೋಪಾಧ್ಯಯ್
ಅತ್ಯುತ್ತಮ ತುಳು ಸಿನಿಮಾ: ಪಿಂಗಾರ
ಅತ್ಯುತ್ತಮ ಹರಿಯಾಣ್ವಿ ಸಿನಿಮಾ: ಛೋರಿಯನ್ ಛೋರನ್ ಸೇ ಕಾಮ್‌ ನಹೀ ಹೋತಿ
ಅತ್ಯುತ್ತಮ ತೆಲುಗು ಸಿನಿಮಾ: ಜೆರ್ಸಿ
ಅತ್ಯುತ್ತಮ ತಮಿಳು ಸಿನಿಮಾ: ಅಸುರನ್
ಅತ್ಯುತ್ತಮ ಪಂಜಾಬಿ ಸಿನಿಮಾ: ರಬ್ ದ ರೇಡಿಯೋ 2
ಅತ್ಯುತ್ತಮ ಒಡಿಯಾ ಸಿನಿಮಾ: ಸಾಲಾ ಬುಧಾರ್‌ ಬದ್ಲಾ ಮತ್ತು ಕಲಿರಾ ಅತೀತ
ಅತ್ಯುತ್ತಮ ಮಣಿಪುರಿ ಸಿನಿಮಾ: ಐಗಿ ಕೋನ
ಅತ್ಯುತ್ತಮ ಮಲಯಾಳಂ ಸಿನಿಮಾ: ಕಳ್ಳ ನೊಟ್ಟಂ
ಅತ್ಯುತ್ತಮ ಮರಾಠಿ ಸಿನಿಮಾ: ಬರ್ದೋ
ಅತ್ಯುತ್ತಮ ಕೊಂಕಣಿ ಸಿನಿಮಾ: ಕಾಜ್ರೋ
ಅತ್ಯುತ್ತಮ ಕನ್ನಡ ಸಿನಿಮಾ: ಅಕ್ಷಿ
ಅತ್ಯುತ್ತಮ ಹಿಂದಿ ಸಿನಿಮಾ: ಛಿಛೋರೆ
ಅತ್ಯುತ್ತಮ ಬಂಗಾಳಿ ಸಿನಿಮಾ: ಗುಮ್ನಾಮಿ
ಅತ್ಯುತ್ತಮ ಸಾಹಸ ನಿರ್ದೇಶನ: ಅವನೇ ಶ್ರೀಮನ್ನಾರಾಯಣ (ಕನ್ನಡ- ವಿಕ್ರಮ್‌ ಮೋರ್)
ಅತ್ಯುತ್ತಮ ನೃತ್ಯ ನಿರ್ದೇಶನ: ಮಹರ್ಷಿ (ತೆಲುಗು)
ಅತ್ಯುತ್ತಮ ಸ್ಪೆಷಲ್‌ ಎಫೆಕ್ಟ್‌: ಮರಕ್ಕರ್‌ (ಮಲಯಾಳಂ)
ವಿಶೇಷ ಜ್ಯೂರಿ ಪ್ರಶಸ್ತಿ: ಓತ್ತಾ ಸೆರುಪ್ಪು ಸೈಜ್‌-7 (ತಮಿಳು)
ಅತ್ಯುತ್ತಮ ಸಾಹಿತ್ಯ: ಕೊಲಾಂಬಿ (ಮಲಯಾಳಂ)
ಅತ್ಯುತ್ತಮ ಸಂಗೀತ ನಿರ್ದೇಶನ (ಹಾಡುಗಳು): ವಿಶ್ವಾಸಂ (ತಮಿಳು- ಡಿ. ಇಮ್ಮಾನ್)
ಅತ್ಯುತ್ತಮ ಸಂಗೀತ ನಿರ್ದೇಶನ: ಜ್ಯೇಷ್ಟ್‌ಪುತ್ರೋ (ಬಂಗಾಳಿ-ಪ್ರಬುದ್ಧ ಬ್ಯಾನರ್ಜೀ)
ಅತ್ಯುತ್ತಮ ಮೇಕಪ್: ಹೆಲೆನ್ (ಮಲಯಾಳಂ)
ಅತ್ಯುತ್ತಮ ನಿರ್ಮಾಣ ವಿನ್ಯಾಸ: ಆನಂದಿ ಗೋಪಾಲ್

Comments are closed.