ಮನೋರಂಜನೆ

ಅಮಿತಾಭ್‌ ಬಚ್ಚನ್‌ ರೊಂದಿಗೆ ನಟಸಲಿರುವ ರಶ್ಮಿಕಾ ಮಂದಣ್ನ!

Pinterest LinkedIn Tumblr


ದಿನದಿಂದ ದಿನಕ್ಕೆ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಘಟಾನುಘಟಿ ಸ್ಟಾರ್‌ ನಟರ ಜೊತೆ ನಟಿಸುವ ಅವಕಾಶ ಅವರಿಗೆ ಸಿಗುತ್ತಿದೆ. ಈಗ ಅವರ ಅಭಿಮಾನಿಗಳು ಸಖತ್‌ ಖುಷಿ ಆಗುವಂತಹ ಒಂದು ಬಿಗ್‌ ನ್ಯೂಸ್‌ ಕೇಳಿಬಂದಿದೆ.

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ತಮ್ಮ ಮೊದಲ ಬಾಲಿವುಡ್‌ ಸಿನಿಮಾ ಘೋಷಣೆ ಮಾಡಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೇಳಿಬಂದಿದೆ. ಭಾರತೀಯ ಚಿತ್ರರಂಗದ ಮೇರುನಟರಲ್ಲಿ ಒಬ್ಬರಾದ ಅಮಿತಾಭ್‌ ಬಚ್ಚನ್‌ ಜೊತೆ ನಟಿಸುವ ಅವಕಾಶ ರಶ್ಮಿಕಾಗೆ ಸಿಕ್ಕಿದೆ ಎಂಬ ಮಾಹಿತಿ ಕೇಳಿಬರುತ್ತಿದೆ!

‘ಕ್ವೀನ್‌’, ‘ಸೂಪರ್‌ 30’ ರೀತಿಯ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ವಿಕಾಸ್‌ ಬಹ್ಲ್‌ ಅವರ ಹೊಸ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅಮಿತಾಭ್‌ ಬಚ್ಚನ್‌ ತೆರೆ ಹಂಚಿಕೊಳ್ಳಲಿದ್ದಾರೆ. ಅವರ ಜೊತೆಗೆ ಅನುಭವಿ ನಟಿ ನೀನಾ ಗುಪ್ತಾ ಕೂಡ ಬಣ್ಣಹಚ್ಚಲಿದ್ದಾರೆ. 2021ರ ಮಾರ್ಚ್‌ ತಿಂಗಳಿನಿಂದ ಇದರ ಶೂಟಿಂಗ್‌ ಆರಂಭ ಆಗಲಿದೆ ಎಂಬ ಸುದ್ದಿ ಬಿ-ಟೌನ್‌ ಅಂಗಳದಲ್ಲಿ ಹರಿದಾಡುತ್ತಿದೆ.

ಅಮಿತಾಭ್‌ ಮತ್ತು ರಶ್ಮಿಕಾ ತಂದೆ-ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಈ ಸಿನಿಮಾ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ರಶ್ಮಿಕಾ ಆಗಲಿ, ನಿರ್ದೇಶಕರಾಗಲಿ ಏನನ್ನೂ ಬಾಯಿ ಬಿಟ್ಟಿಲ್ಲ. ಒಟ್ಟಿನಲ್ಲಿ ಇಂಥದ್ದೊಂದು ಗುಸುಗುಸು ಬಲವಾಗಿ ಹಬ್ಬಿರುವುದಂತೂ ನಿಜ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಡೆಡ್ಲಿ’ ಎಂದು ಶೀರ್ಷಿಕೆ ಇಡಲಾಗಿದ್ದು, ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದು ಇದಕ್ಕೆ ಬಂಡವಾಳ ಹೂಡಲಿದೆ.

‘ಕಿರಿಕ್‌ ಪಾರ್ಟಿ’ ಸಿನಿಮಾದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದ ರಶ್ಮಿಕಾ, ನಂತರ ಟಾಲಿವುಡ್‌ನಲ್ಲಿ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿರು. ಬಳಿಕ ಕಾಲಿವುಡ್‌ಗೂ ಕಾಲಿಟ್ಟರು. ದಕ್ಷಿಣದಲ್ಲಿ ಮಿಂಚಿದ ಅವರಿಗೆ ಈಗ ಬಾಲಿವುಡ್‌ ಕೈ ಬೀಸಿ ಕರೆಯುತ್ತಿದೆ. ಮೊದಲ ಹಿಂದಿ ಸಿನಿಮಾ ‘ಮಿಷನ್‌ ಮಜ್ನು’ನಲ್ಲಿ ಅವರು ಸ್ಟಾರ್‌ ನಟ ಸಿದ್ಧಾರ್ಥ್‌ ಮಲ್ಹೋತ್ರಾಗೆ ಜೋಡಿಯಾಗಿ ನಟಿಸಲಿದ್ದಾರೆ. ಇನ್ನು, ಇತ್ತೀಚೆಗಷ್ಟೇ ನಟ ರಕ್ಷಿತ್‌ ಶೆಟ್ಟಿ ಅವರು ರಶ್ಮಿಕಾಗೆ ಮನಸಾರೆ ಹರಸಿದ್ದರು.

Comments are closed.