ಮನೋರಂಜನೆ

ಶೂಟಿಂಗ್​ನಿಂದ ಬಿಡುವಿನ ವೇಳೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಖ್ಯಾತ ನಟನ ದುರಂತ ಸಾವು

Pinterest LinkedIn Tumblr

ತಿರುವನಂತಪುರಂ: ಹಲವು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಖ್ಯಾತ ನಟ ಅನಿಲ್ ಪಿ ನೆಡುಮಂಗಾಡ್ ಅವರು ನಿನ್ನೆ ಸಂಜೆ ನೀರಿನಲ್ಲಿ ಮುಳುಗಿ ದುರಂತ ಸಾವನ್ನಪ್ಪಿದ್ದಾರೆ.

ಅನಿಲ್ ನೆಡುಮಂಗಾಡ್ (48) ಮೃತಪಟ್ಟ ಮಲಯಾಳಂ ನಟ. ಇವರು ಸ್ನಾನಕ್ಕೆ ಎಂದು ಡ್ಯಾಮ್‍ಗೆ ಇಳಿದು ಸಾವನ್ನಪ್ಪಿದ್ದಾರೆ.

ಪ್ರಾಥಮಿಕ ವಿಚಾರಣೆಯ ಪ್ರಕಾರ, ಸಂಜೆ ಸುಮಾರಿಗೆ ನಟ ಅನಿಲ್ ನೆಡುಮಂಗಾಡ್ ಅವರ ಸ್ನೇಹಿತರೊಂದಿಗೆ ಶೂಟಿಂಗ್ ವಿರಾಮದ ಸಮಯದಲ್ಲಿ ಸ್ನಾನ ಮಾಡಲು ಡ್ಯಾಮ್‍ಗೆ ಹೋಗಿದ್ದಾರೆ. ಆಗ ಅಲ್ಲಿ ಅವರು ಆಳವಾದ ನೀರಿಗೆ ಇಳಿದಾಗ ನೀರಿನ ಸೆಳೆತ ಅವರನ್ನು ಎಳೆದೊಯ್ದಿದೆ. ತಕ್ಷಣ ಅನಿಲ್ ಅವರನ್ನು ನೀರಿನಿಂದ ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ನಟನ ಶವವನ್ನು ತೋಡುಪುಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಎಂದು ಇಡುಕಿ ವಿಶೇಷ ಶಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶೂಟಿಂಗ್​ನಿಂದ ಬಿಡುವು ಮಾಡಿಕೊಂಡು ಅನಿಲ್ ನೆಡುಮಂಗಾಡ್ ಹಾಗೂ ಅವರ ಕೆಲ ಸ್ನೇಹಿತರು ಜಲಾಶಯದ ಬಳಿ ಸ್ನಾನಕ್ಕೆ ಹೋಗಿದ್ದಾರೆ. ಅನಿಲ್ ಅವರು ಸ್ವಲ್ಪ ಆಳಕ್ಕೆ ಹೋದ ನಂತರ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಹೋಗಿದರು ಎಂದು ಇಡುಕ್ಕಿ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅನಿಲ್ ಅವರನ್ನು ಶೀಘ್ರದಲ್ಲೇ ನೀರಿನಿಂದ ಮೇಲೆತ್ತಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ ಉಳಿಯಲಿಲ್ಲ.

ಕಿರುತೆರೆಯಲ್ಲಿ ಕಾರ್ಯಕ್ರಮ ನಿರೂಪಕ ಮತ್ತು ನಿರ್ಮಾಪಕರಾಗಿ ಕಿರುತೆರೆಯಲ್ಲಿ ಅಡಿ ಇಟ್ಟಿದ್ದ ಅನಿಲ್ ನೆಡುಮಂಗಾಡ್ ಅವರು 2014ರಲ್ಲಿ ನಾನ್ ಸ್ಟೀವ್ ಲೋಪೆಜ್ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಧುಮುಕಿದ್ದರು. ಅಯ್ಯಪ್ಪನುಮ್ ಕೋಶಿಯುಮ್, ಪಾವಡ, ಕಮ್ಮತ್ತಿ ಪಾಡಮ್, ಕಿಸ್ಮತ್, ಪರೋಲ್, ಪಾಪಮ್ ಚೇಯ್ಯತವರ್ ಕಲ್ಲೇರಿಯಾಟ್ಟೆ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದೇ ವೇಳೆ, ಅನಿಲ್ ಅವರ ಸಾವಿಗೆ ಮಲಯಾಳಂ ಚಿತ್ರರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ಧಾರೆ. ಪೃಥ್ವಿರಾಜ್ ಸುಕುಮಾರನ್, ಸುರೇಶ್ ಗೋಪಿ, ಬಿಜು ಮೆನನ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Comments are closed.