
ಟಾಲಿವುಡ್ನ ಹಂಕ್, ಬಾಹುಬಲಿಯ ಬಲ್ಲಾಳದೇವ ರಾಣಾ ಇತ್ತೀಚೆಗಷ್ಟೆ ಬಹುಕಾಲದ ಗೆಳತಿ ಮಿಹಿಕಾರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ರಾಣಾ ಅವರ ವೃತ್ತಿ ಜೀವನವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿತ್ತು. ಬಾಹುಬಲಿ ಸಿನಿಮಾದ ನಂತರ ರಾಣಾಗೆ ಸಿಗುವ ಆಫರ್ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. ಟಾಲಿವುಡ್ನಲ್ಲಿ ರಾಣಾಗಾಗಿಯೇ ಸಿನಿಮಾ ಕಥೆ ಬರೆಯಲಾರಂಭಿಸಿದ್ದರು. ಯಶಸ್ಸನ ಉತ್ತುಂಗ ತಲುಪಿದ್ದ ರಾಣಾಗೆ ಕಾದಿತ್ತು ಒಂದು ಆಘಾತಕಾರಿ ವಿಷಯ. ಒಂದು ಕಡೆ ಕೈಯಲ್ಲಿ ಸಾಲು ಸಾಲು ಸಿನಿಮಾಗಳು, ಮತ್ತೊಂದು ಕಡೆ ರಾಣಾ ದಗ್ಗುಬಾಟಿ ಆರೋಗ್ಯದ ಸಮಸ್ಯೆಯಿಂದಾಗಿ ಆಸ್ಪತ್ರೆಪಾಲಾಗಿದ್ದರು. ಅನಾರೋಗ್ಯ ಎಂದರೆ ಜೀವನ ಹಾಗೂ ಮರಣದ ನಡುವೆ ಹೋರಾಟ ನಡೆಸುತ್ತಿದ್ದರು ರಾಣಾ. ಜೀವವೇ ಹೋಗುವ ಸಾಧ್ಯತೆ ಇದೆ ಎಂದು ತಿಳಿದಿದ್ದರೂ ರಾಣಾ ಯಾವ ವಿಷಯವನ್ನುಆಗ ಅಭಿಮಾನಿಗಳಿಂದ ಮುಚ್ಚಿಟ್ಟಿದ್ದರು.
ಲಾಕ್ಡೌನ್ ಆರಂಭಕ್ಕೂ ಮುನ್ನ ಅಂದರೆ, ಫೆಬ್ರವರಿಯಲ್ಲಿ ರಾಣಾ ಅವರಿಗೆ ಕಿಡ್ನಿ ವೈಫಲ್ಯವಾಗಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಅಭಿಮಾನಿಗಳು ರಾಣಾ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಆದರೆ ರಾಣಾ ಎಲ್ಲ ವಿಷಯಗಳು ಗಾಳಿಸುದ್ದಿ ಎಂದು ತಳ್ಳಿ ಹಾಕಿದ್ದರು.
ಇನ್ನು, ಆಗಲೇ ರಾಣಾ ವಿದೇಶದಲ್ಲಿ ಕಿಡ್ನಿ ವೈಫಲ್ಯದಿಂದಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡಿತ್ತು. ಆಗ ರಾಣಾ ತುಂಬಾ ಸಪೂರವಾಗಿದ್ದರು. ಆ ಫೋಟೋಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆಗಲೇ ರಾಣಾ ಅವರ ತಾಯಿ, ಮಗನಿಗೆ ಕಿಡ್ನಿ ದಾನ ಮಾಡಿದ್ದಾರೆ ಎಂದೂ ಹೇಳಲಾಗಿತ್ತು.
ಈ ಎಲ್ಲ ವಿಷಯಗಳ ಬಗ್ಗೆ ರಾಣಾ ಈಗ ಟಾಕ್ ಶೋ ಒಂದರಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿರುವ ಕುರಿತು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ‘ನನ್ನ ಜೀವನ ಫಾಸ್ಟ್ಫಾರ್ವಡ್ನಲ್ಲಿರುವಾಗ ಒಮ್ಮೆಲೆ ಪಾಸ್ ಅದಾಂತಾಯಿತು. ನನಗೆ ಚಿಕ್ಕಂದಿನಿಂದ ರಕ್ತದೊತ್ತಡವಿತ್ತು. ಹೃದಯ ಸುತ್ತ ಕ್ಯಾಲ್ಸಿಫಿಕೇಶನ್ ಆಗಿತ್ತು. ಇದರ ಜೊತೆಗೆ ಕಿಡ್ನಿ ವೈಫಲ್ಯ ಬೇರೆ. ಇವೆಲ್ಲದರಿಂದಾಗಿ ನನಗೆ ಸ್ಟ್ರೋಕ್ ಅಥವಾ ಹ್ಯಾಮರೇಜ್ ಆಗುವ ಸಾಧ್ಯತೆ ಇತ್ತು. ಜೊತೆಗೆ ಶೇ 30ರಷ್ಟು ಸಾಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದರು’ ಅಂತ ರಾಣಾ, ಸಮಂತಾ ಅಕ್ಕಿನೇನಿ ನಡೆಸಿಕೊಡುವ ಟಾಕ್ ಶೋ ಶ್ಯಾಮ್ಜಾಮ್ನಲ್ಲಿ ಕಣ್ಣೀರು ಇಟ್ಟಿದ್ದಾರೆ.
ಈ ಹಿಂದೆ ತನಗೇನೂ ಆಗಿಲ್ಲ ಎಂದು ಹೇಳುತ್ತಿದ್ದ ರಾಣಾ, ಈಗ ಇದೇ ಮೊದಲ ಬಾರಿಗೆ ತಮ್ಮ ಅನಾರೋಗ್ಯದ ಕುರಿತು ಮಾತನಾಡಿದ್ದಾರೆ. ಸ್ಯಾಮ್ಜಾಮ್ ಟಾಕ್ ಶೋನ ಪ್ರೊಮೊದಲ್ಲಿ ರಾಣಾ ಮಾತನಾಡಿರುವ ಕ್ಲಿಪ್ ಇದ್ದು, ವಿಡಿಯೋ ವೈರಲ್ ಆಗುತ್ತಿದೆ.
ರಾಣಾ ಅಭಿನಯದ ಅರಣ್ಯ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಇನ್ನು ಲಾಕ್ಡೌನ್ ಸಡಿಲಗೊಂಡ ನಂತರ ರಾಣಾ ಮತ್ತೆ ಚಿತ್ರೀಕರಣದ ಸೆಟ್ಗೆ ಮರಳಿದ್ದಾರೆ. ರಾಣಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಅದರ ಶೂಟಿಂಗ್ನಲ್ಲಿ ವ್ಯಸ್ತವಾಗಿದ್ದಾರೆ.
Comments are closed.