
ಕೌಟುಂಬಿಕ ಸಮಸ್ಯೆಯಿಂದ ನೊಂದು ಆಧ್ಯಾತ್ಮದ ಕಡೆ ಒಲವು ಪಡೆದು ಸನ್ಯಾಸಿಯಾದ ಅನೇಕ ಉದಾಹರಣೆಗಳಿವೆ. ಆ್ಯಡಿ ಆಡಮ್ಸ್ ಹೆಸರಿನ ಯುವತಿ ಕೂಡ ಸಂಸಾರ ಜಂಜಾಟದಿಂದ ಹೊರ ಬಂದು 17ನೇ ವರ್ಷಕ್ಕೆ ಸನ್ಯಾಸಿ ಆಗಿದ್ದರು. ಅಚ್ಚರಿ ಎಂದರೆ, 9 ವರ್ಷಗಳ ನಂತರ ಆಕೆ ಆಗಿದ್ದು ನೀಲಿತಾರೆ!
ಹೌದು, ಆ್ಯಡಿ ಆ್ಯಡಮ್ಸ್ಗೆ 17ನೇ ವರ್ಷಕ್ಕೆ ಆಧ್ಯಾತ್ಮದ ಕಡೆ ಒಲವು ಬಂದಿತ್ತು. ಹೀಗಾಗಿ ಚರ್ಚ್ ಒಂದರಲ್ಲಿ ಅವರು ಸನ್ಯಾಸಿ ಆಗಿ ಸೇರಿಕೊಂಡರು. ಬರೋಬ್ಬರಿ 9 ವರ್ಷಗಳ ಕಾಲ ಅವರು ಸನ್ಯಾಸಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ, ಅವರ ಬಳಿ ಕಾಮನೆಗಳನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಹೀಗಾಗ, ಆಕೆ ಹಾಲಿವುಡ್ ಚಿತ್ರರಂಗಕ್ಕೆ ಕಾಲಿಡಲು ನಿರ್ಧರಿಸಿದ್ದರು.
ಹಾಲಿವುಡ್ನಲ್ಲಿ ನಟಿ ಆಗುವುದು ಎಂದರೆ ಅದೇನು ಸಾಮಾನ್ಯವೇ? ಆದರೂ ಆ್ಯಡಿ ಛಲ ಬಿಡಲಿಲ್ಲ. ಸನ್ಯಾಸತ್ವವನ್ನು ತ್ಯಜಿಸಿ ಬಣ್ಣದ ಲೋಕಕ್ಕೆ ಕಾಲಿಡಲು ಮುಂದಾದರು.
ಸಿಕ್ಕ ಸಿಕ್ಕವರ ಬಳಿ ಚಾನ್ಸ್ ಕೇಳಿದರು. ಆದರೆ, ಕನಸು ಈಡೇರಲೇ ಇಲ್ಲ. ಈ ವೇಳೆ ಆ್ಯಡಿಯನ್ನು ಸೆಳೆದಿದ್ದು ಪಾರ್ನ್ ಲೋಕ.
ಹಾಲಿವುಡ್ ಕನಸು ನನಸಾಗದ ಕಾರಣ ಆ್ಯಡಿ ನೀಲಿ ಲೋಕಕ್ಕೆ ಕಾಲಿಟ್ಟರು. ಸಾಕಷ್ಟು ಪಾರ್ನ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಅಮೇರಿಕದಲ್ಲಿ ಆ್ಯಡಿ ಬಹುಬೇಡಿಕೆಯ ಪಾರ್ನ್ ನಟಿ. ಅವರು ಇತ್ತೀಚೆಗೆ ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
“ಸನ್ಯಾಸಿ ಆಗುವುದಕ್ಕೂ ಮೊದಲು ಒಮ್ಮೆ ಲೈಂಗಿಕ ಸಂಪರ್ಕ ಬೆಳೆಸಿದ್ದೆ. ಇದಾದ ನಂತರ ಕಾಮನೆಗಳನ್ನು ಬದಿಗಿಟ್ಟು ಚರ್ಚ್ಗೋಸ್ಕರ 9 ವರ್ಷ ಸೇವೆ ಸಲ್ಲಿಸಿದ್ದೆ. ಆದರೆ, ನನ್ನ ಆಸೆಗಳನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಚಿತ್ರರಂಗಕ್ಕೆ ಕಾಲಿಡುವ ಪ್ರಯತ್ನ ಮಾಡಿದೆ. ಅದೂ ವಿಫಲವಾಯಿತು. ಈಗ ಪಾರ್ನ್ ಉದ್ಯಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದೇನೆ,” ಎಂದಿದ್ದಾರೆ ಅವರು.
Comments are closed.