ಮನೋರಂಜನೆ

ತೆಲುಗು ನಟ ವಿಜಯ್ ದೇವರಕೊಂಡ ತಮ್ಮನ ಚಿತ್ರವನ್ನು ಕೊಂಡಾಡಿದ ರಶ್ಮಿಕಾ ಮಂದಣ್ಣ!

Pinterest LinkedIn Tumblr


ನಟಿ ರಶ್ಮಿಕಾ ಮಂದಣ್ಣ ಅವರು ತೆಲುಗು ನಟ ವಿಜಯ್ ದೇವರಕೊಂಡರ ಜೊತೆ ಈಗಾಗಲೇ 2 ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಅವರೀಗ ಒಂದು ಸಿನಿಮಾ ನೋಡಿ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಆ ಚಿತ್ರದ ಹೀರೋ ವಿಜಯ್ ದೇವರಕೊಂಡ ಅವರ ಸಹೋದರ ಅನ್ನೋದು ವಿಶೇಷ!

ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ‘ದೊರಸಾನಿ’ ಅನ್ನೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಈಗ ಅವರು ‘ಮಿಡಲ್ ಕ್ಲಾಸ್ ಮೆಲೋಡಿಸ್‌’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ನೇರವಾಗಿ ಓಟಿಟಿಯಲ್ಲಿ ತೆರೆಗೆ ಬರಲಿದೆ. ಸದ್ಯ ಟ್ರೇಲರ್ ಲಾಂಚ್ ಆಗಿದ್ದು, ನ.20ಕ್ಕೆ ‘ಮಿಡಲ್ ಕ್ಲಾಸ್…’ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆದರೆ, ರಶ್ಮಿಕಾ ಅದಕ್ಕೂ ಮೊದಲೇ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ! ಅಲ್ಲದೆ, ಸಿಕ್ಕಾಪಟ್ಟೆ ಹೊಗಳಿದ್ದಾರೆ ಕೂಡ!

ಈ ಕುರಿತು ಟ್ವೀಟ್ ಮಾಡಿರುವ ರಶ್ಮಿಕಾ, ‘ಎಂಥ ನಿಜವಾದ ಸಿನಿಮಾವಿದು. ಆ ಪಾತ್ರಗಳು, ಆ ಲೊಕೇಷನ್, ಆ ಕಥೆ, ಮೇಕಿಂಗ್, ಶ್ರಮ.. ನಾನು ಈ ಸಿನಿಮಾವನ್ನು ನೋಡಿದ್ದೇನೆ. ನಾನು ತುಂಬ ನಕ್ಕಿದ್ದೇನೆ.. ಈ ಚಿತ್ರದ ಹಿಡಿತಕ್ಕೊಳಗಾಗಿದ್ದೆ.. ಆ ದೊಡ್ಡ ಪರದೆಯಲ್ಲಿ ನನ್ನ ಇಬ್ಬರು ಸ್ನೇಹಿತರು ಇದ್ದಾರೆ ಎಂದು ನಂಬಲು ಸಾಧ್ಯವಾಗಲಿಲ್ಲ. ಅವರನ್ನು ತೆರೆಮೇಲೆ ನೋಡುವುದರಿಂದ ನನಗೆ ಆನಂದವಾಗಿದೆ. ಈ ಸಿನಿಮಾ ನನಗೆ ತುಂಬ ಇಷ್ಟವಾಗಿದೆ. ಇಡೀ ತಂಡಕ್ಕೆ ನನ್ನ ಹೃದಯಪೂರ್ವಕ ಶುಭಾಶಯಗಳು. ಆನಂದ್ ದೇವರಕೊಂಡ ಮತ್ತು ವರ್ಷಾ ಬೊಲ್ಲಮ್ಮ ನಿಮ್ಮ ಸಿನಿಮಾವನ್ನು, ನಿಮ್ಮ ಪಾತ್ರಗಳನ್ನು ಮತ್ತು ನಿಮ್ಮನ್ನು ನಾನು ಪ್ರೀತಿಸುತ್ತೇನೆ. ನನಗೆ ನಂಬಿಕೆ ಇದೆ. ಪ್ರೇಕ್ಷಕರು ಕೂಡ ನಿಮ್ಮನ್ನು ಪ್ರೀತಿ ಮಾಡಲಿದ್ದಾರೆ. ನಿರ್ದೇಶಕರಿಗೆ ಶುಭಾಶಯಗಳು.. ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ…’ ಎಂದಿದ್ದಾರೆ.

ಅಂದಹಾಗೆ, ಈ ಸಿನಿಮಾದ ನಟಿ ವರ್ಷಾ ಬೊಲ್ಲಮ್ಮ ಕೂಡ ಕೊಡಗಿನವರು. ಆದರೆ, ಜನಪ್ರಿಯರಾಗಿರುವುದು ಮಾತ್ರ ತಮಿಳು, ತೆಲುಗಿನಲ್ಲಿ. ’96’, ‘ಬಿಗಿಲ್’ ಸಿನಿಮಾಗಳಲ್ಲಿ ಗಮನಸೆಳೆಯುವಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವರ್ಷಾ, ಈಗ ಆನಂದ್ ಜೊತೆ ‘ಮಿಡಲ್‌ ಕ್ಲಾಸ್ ಮೆಲೋಡಿಸ್’ ಸಿನಿಮಾ ಮಾಡಿದ್ದಾರೆ.

Comments are closed.