ಮನೋರಂಜನೆ

ಉದ್ಯಮಿ ಜೊತೆ ನಟಿ ಕಾಜಲ್ ಅಗರ್ವಾಲ್ ವಿವಾಹ

Pinterest LinkedIn Tumblr

ಮುಂಬೈ: ಉದ್ಯಮಿ ಗೌತಮ್ ಕಿಚ್ಲು ಜೊತೆ ನಟಿ ಕಾಜಲ್ ಅಗರ್ವಾಲ್ ವಿವಾಹ ಮುಂಬೈಯಲ್ಲಿ ನೆರವೇರಿತು.

ತಮ್ಮ ಸಮೀಪ ಬಂಧುಗಳು ಮತ್ತು ಆಪ್ತ ಸ್ನೇಹಿತರಿಗಷ್ಟೇ ಜೋಡಿ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಕಾಜಲ್ ಅಗರ್ವಾಲ್ ಕಡುಗೆಂಪು ಬಣ್ಣದ ವಧುವಿನ ಉಡುಗೆಯಲ್ಲಿ ಕಂಗೊಳಿಸಿದ್ದರೆ ತಿಳಿ ಗುಲಾಬಿ ಬಣ್ಣದ ದುಪ್ಪಟ್ಟಾ ಹಾಗೂ ಗುಲಾಬಿ ಅಚ್ಚೊತ್ತಿದ ಬೆಳ್ಳಿ ಬಣ್ಣದ ಶೆರ್ವಾನಿಯಲ್ಲಿ ಮದುಮಗ ಗೌತಮ್ ಮಿಂಚಿದ್ದರು.

ಕಾಜಲ್ ಮದುವೆಗೆ ಮುನ್ನ ಕಪ್ಪು ಬಿಳುಪಿನ ಮದುಮಗಳ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಬಿಳಿ ಬಾತ್ ರೋಬ್ ನಲ್ಲಿ ಸಾಂಪ್ರದಾಯಿಕ ಜ್ಯುವೆಲ್ಲರಿ ಮತ್ತು ಗಾಜ್ರಾ ತೊಟ್ಟಿದ್ದರು. ಅವರು ಮದುವೆಗೆ ತೊಟ್ಟ ಲೆಹಂಗಾವನ್ನು ಹಿಂದೆ ನೇತುಹಾಕಲಾಗಿತ್ತು. ಇದಕ್ಕೂ ಮುನ್ನ ತಮ್ಮ ಹಳದಿ ಶಾಸ್ತ್ರದ ಫೋಟೋಗಳನ್ನು ಕೂಡ ಶೇರ್ ಮಾಡಿದ್ದರು.

ಸಿಂಗಂ, ಮಗದೀರ, ಸ್ಪೆಷಲ್ 26, ತುಪ್ಪಕ್ಕಿ ಚಿತ್ರಗಳಿಂದ ಜನಪ್ರಿಯರಾದ ಕಾಜಲ್ ಅಗರ್ವಾಲ್ ಕಳೆದ ಅಕ್ಟೋಬರ್ 6ರಂದು ಗೌತಮ್ ಜೊತೆ ತಮ್ಮ ವಿವಾಹ ನಿಶ್ಚಯವನ್ನು ಘೋಷಿಸಿಕೊಂಡಿದ್ದರು.

Comments are closed.