ಮನೋರಂಜನೆ

ಪೋರ್ನ್ ಸೈಟ್‌ಗಳಲ್ಲಿ ಹರಿದಾಡುತ್ತಿರುವ ವೀಡಿಯೊ ತೆಗೆಯುವಂತೆ 6 ವರ್ಷದಿಂದ ಹೋರಾಟ ನಡೆಸುತ್ತಿರುವ ನಟಿ

Pinterest LinkedIn Tumblr

ಈ ನಟಿ ಸಣ್ಣ ವಯಸ್ಸಿನಲ್ಲಿರುವಾಗ ನಟಿಸಿದ್ದ ಸಿನೆಮಾದ ಅತ್ಯಾಚಾರದ ದೃಶ್ಯ ಪೋರ್ನ್ ಸೈಟ್‌ಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ನೊಂದು ಕಳೆದ 6 ವರ್ಷಗಳಿಂದ ಅದನ್ನು ತೆಗೆಯಲು ಸತತ ಹೋರಾಟ ನಡೆಸುತ್ತಿದ್ದಾರೆ.

ಅಪ್ರಾಪ್ತೆಯಾಗಿದ್ದಾಗ ಸಿನಿಮಾದ ಅತ್ಯಾಚಾರ ಮಾಡೋ ದೃಶ್ಯದಲ್ಲಿ ನಟಿಸಿದ ಬಾಲೆಯ ಲೀಕ್‌ ಆದ ವಿಡಿಯೋ ಈಗಲೂ ಪೋರ್ನ್ ಸೈಟ್‌ಗಳಲ್ಲಿ ರಾರಾಜಿಸುತ್ತಿದೆ. ನಟಿಸುವಾಗ ದೃಶ್ಯಗಳನ್ನು ಸಿನಿಮಾಗೆ ಬಳಸಿ ಡಿಲೀಟ್ ಮಾಡಲಾಗುತ್ತದೆ ಎಂದಿದ್ದರೂ, ವಿಡಿಯೋ ತುಣುಕು ಪೋರ್ನ್ ಸೈಟ್‌ನಲ್ಲಿ ಸಿಗುತ್ತಿದ್ದು ಈಗಲೂ ನಟಿ ಅದನ್ನು ರಿಮೂವ್ ಮಾಡಲು ಹೋರಾಡುತ್ತಲೇ ಇದ್ದಾರೆ.

7 ವರ್ಷದ ಹಿಂದೆ ನಟಿ ಸೋನಾ ಎಂ ಅಬ್ರಹಾಂ ಫೋರ್ ಸೇಲ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. 2013ರ ಸಿನಿಮಾದಲ್ಲಿ ಪುಟ್ಟ ಬಾಲಕಿಯ ಅತ್ಯಾಚಾರವಾದಾಗ ಅದನ್ನು ನೋಡಿ ಯುವತಿ ತನ್ನ ಬದುಕು ಕೊನೆಗಾಣಿಸುವ ಕಥೆ ಇದೆ. ಆಗ 14 ವರ್ಷದವಳಾಗಿದ್ದ ಸೋನಾ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ಆ ದೃಶ್ಯ ಅತ್ಯಾಚಾರ ನಡೆಸುವ ದೃಶ್ಯ.

ಈ ದೃಶ್ಯಗಳನ್ನು ಹ್ಯಾಂಡ್‌ ಕ್ಯೆಮರಾ ಮೂಲಕ ಖಾಸಗಿಯಾಗಿ ಚಿತ್ರೀಕರಿಸಲಾಗಿತ್ತು. ಸಿನಿಮಾ ನಿರ್ದೇಶಕ ಸತೀಶ್ ಅನಂತಪುರಿ, ನಿರ್ಮಾಪಕ ಅಂಟೊ ಕಡವೆಲಿಲ್ ಈ ವಿಡಿಯೋ ಲೀಕ್ ಆಗುವುದಿಲ್ಲ ಎಂದು ಭರವಸೆ ಕೊಟ್ಟಿದ್ದರು ಎಂದಿದ್ದಾರೆ ಸೋನಾ.

ಆದರೆ ಒಂದು ವರ್ಷದ ನಂತರ ಈ ಪೂರ್ತಿ ವಿಡಿಯೋ ಇಂಟರ್‌ನೆಟ್‌ನಲ್ಲಿ ಹರಿದಾಡಿದೆ. ಮುಖ್ಯವಾಗಿ ಯೂಟ್ಯೂಬ್‌ನಲ್ಲಿ ವಿಡಿಯೋ ಹರಿದಾಡಿದ್ದು, ಸೋನಾ ಫ್ಯಾಮಿಲಿ ಪೊಲೀಸರ ಮೊರೆ ಹೋಗಿದ್ದಾರೆ. ಅಂದಿನಿಂದಲೂ ಸೋನಾ ತಮ್ಮ ಫೋಟೇಜ್‌ಗಳನ್ನು ಸೈಟ್‌ಗಳಿಂದ ತೆಗೆಯಲು ಪರದಾಡುತ್ತಿದ್ದಾರೆ.

2014ರಲ್ಲಿ ಎರ್ನಾಕುಳಂ ಸಿಟಿ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿದ್ದೆ. ಕಮಿಷನರ್ ಸಹಿ ಇರುವ ಮನವಿ ಕಳಿಸಿದರಷ್ಟೇ ಯೂಟ್ಯೂಬ್‌ನಿಂದ ವಿಡಿಯೋ ತೆಗೆಯಲು ಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದರು. ಆ ಸಂದರ್ಭ ಎಫ್‌ಐಆರ್ ದಾಖಲಿಸಲಿಲ್ಲ ಎಂದಿದ್ದಾರೆ ಸೋನಾ.

ಯೂಟ್ಯೂಬ್‌ನಿಂದ ವಿಡಿಯೋ ತೆಗೆದರೂ ಬಹಳಷ್ಟು ಪೋರ್ನ್ ಸೈಟ್‌ಗಳಲ್ಲಿ ವಿಡಿಯೋ ಹರಿದಾಡುತ್ತಿತ್ತು. 2016ರಲ್ಲಿ ಸೋನಾ ಹಾಗೂ ಆಕೆಯ ತಾಯಿ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಪೊಲೀಸ್ ದೂರು ಕೊಟ್ಟರು. ವಿಡಿಯೋ ಲೀಕ್ ಆದ ನಂತರ ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಲು ನಿರ್ಮಾಪಕರು ಮುಂದಾಗಿಲ್ಲ ಎನ್ನುತ್ತಾರೆ ಸೋನಾ.

ಕೇಸು ಸೈಬರ್‌ ಸೆಲ್‌ಗೆ ಹಸ್ತಾಂತರವಾಯಿತು. ಆದರೆ ವಿಡಿಯೋ ರಿಮೂವ್ ಮಾಡಲು ಸಾಧ್ಯವಾಗಲಿಲ್ಲ. . ಅರೆಸ್ಟ್ ಆದ ಕೂಡಲೇ ಆರೋಪಿಗಳು ಜಾಮೀನು ಮೂಲಕ ಹೊರಗೆ ಬಂದರು ಎಂದು ಸೋನಾ ಹೇಳಿದ್ದಾರೆ.

ನ್ಯಾಯಕ್ಕಾಗಿ ಈಕೆ 2016ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತೀಚೆಗಷ್ಟೇ ವಿಡಿಯೋ ಮಾಡಿದ ಈಕೆ ತಮ್ಮ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. 5ನೇ ವರ್ಷದ ಕಾನೂನು ವಿದ್ಯಾರ್ಥಿನಿಯಾಗಿರೋ ಈಕೆಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

Comments are closed.