ಮನೋರಂಜನೆ

3ನೇ ಮದುವೆ ಮುರಿದು ಬಿದ್ದಿರುವುದರ ಕಾರಣ ಹೇಳಿದ ನಟಿ ವನಿತಾ ವಿಜಯ್‌ಕುಮಾರ್!

Pinterest LinkedIn Tumblr


ನಟಿ, ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್‌ಕುಮಾರ್ ಇತ್ತೀಚೆಗೆ ಮೂರನೇ ವಿವಾಹವಾಗಿದ್ದರು, ಈಗ ಈ ಮದುವೆ ಕೂಡ ಮುರಿದು ಬಿದ್ದಿದೆ. ಈ ಕುರಿತು ನಟಿಯು ವಿಡಿಯೋ ಮೂಲಕ ತನ್ನ ಮತ್ತು ಪೀಟರ್ ಪೌಲ್ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

‘ಪೀಟರ್ ಪೌಲ್ ಅವರಿಗೆ ಈ ಹಿಂದೆ ಒಂದು ಮದುವೆ ಆಗಿರುವುದರ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ನಾನು ಅವರ ಆಫೀಸ್‌ಗೆ, ಮನೆಗೆ ಹೋದಾಗ ಅವರು ಸಿಂಗಲ್ ಆಗಿದ್ದರು. ನಮ್ಮ ಮದುವೆ ಟೈಮ್‌ನಲ್ಲಿ ಮೊದಲ ಪತ್ನಿಗೆ ಪೀಟರ್ ವಿಚ್ಛೇದನ ನೀಡಿದಿರುವ ಬಗ್ಗೆಯೂ ಗೊತ್ತಿರಲಿಲ್ಲ. ನನ್ನ ಹಾಗೂ ಮಕ್ಕಳನ್ನು ನೋಡಿಕೊಳ್ಳಲು ಓರ್ವ ಗಂಡಸಿದ್ದರೆ ಒಳ್ಳೆಯದು ಅಂತ ಮದುವೆಯಾದೆ. ಪೀಟರ್ ಪೌಲ್ ಅವರಿಗೆ ಹೃದಯಾಘಾತವಾಗಿತ್ತು. ಅತಿಯಾಗಿ ಮದ್ಯಪಾನ ಮಾಡೋದು, ಸಿಗರೇಟ್ ಸೇದಿದ್ದರಿಂದ ಅವರು ಆಸ್ಪತ್ರೆ ಸೇರುವಂತಾಯಿತು. ಅವರನ್ನು ಗುಣಮುಖರನ್ನಾಗಿಸಲು 15 ಲಕ್ಷ ರೂಪಾಯಿ ಖರ್ಚು ಮಾಡಿದೆ’ ಎಂದು ವನಿತಾ ವಿಜಯ್‌ಕುಮಾರ್ ಹೇಳಿದ್ದಾರೆ.

‘ಕುಡಿಯಲು ಪೀಟರ್ ಬೇರೆಯವರ ಹತ್ತಿರ ದುಡ್ಡು ಕೇಳುತ್ತಿದ್ದರು. ಅದರ ಜೊತೆಗೆ ಚಿತ್ರರಂಗದವರು ಕೂಡ ನನಗೆ ಫೋನ್ ಮಾಡಿ ನಿಮ್ಮ ಲೈಫ್‌ನಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದ್ದರು. ನಾನು ಕೂಡ ಪೀಟರ್ ಅವರಿಗೆ ನಿಮ್ಮ ಲೈಫ್‌ಸ್ಟೈಲ್ ಬದಲಾಯಿಸಿಕೊಳ್ಳಿ ಎಂದು ಹೇಳಿದ್ದೆ. ಅವರ ಫೋನ್ ಮೇಲೂ ನಾನು ನಿಗಾ ಇಟ್ಟಿದ್ದೆ. ಆದರೆ ಅವರು ಸರಿಹೋಗಲಿಲ್ಲ. ವಾರಪೂರ್ತಿ ಕುಡಿಯುತ್ತಿದ್ದರು, ಆಹಾರ ಸೇವಿಸುತ್ತಿರಲಿಲ್ಲ. ಒಂದು ದಿನ ಬೆಳಗ್ಗೆ 4 ಗಂಟೆಗೆ ಮನೆಯಿಂದ ಹೊರಗೆ ಹೋದರು, ಆಮೇಲೆ ಅವರ ಸಹಾಯಕ ಅವರನ್ನು ಮನೆಗೆ ಬಂದು ಬಿಟ್ಟು ಹೋದರು. ನಾನು ಅವರನ್ನು ಎಷ್ಟು ಕಾಳಜಿ ಮಾಡುತ್ತಿದ್ದೆ ಅಂತ ಅವರಿಗೂ ಗೊತ್ತಿದೆ. ನನಗಿಂತ ಜಾಸ್ತಿ ಅವರು ಲಿಕ್ಕರ್‌ನ್ನು ಪ್ರೀತಿ ಮಾಡುತ್ತಿದ್ದರು’ ಎಂದು ವನಿತಾ ವಿಜಯ್‌ಕುಮಾರ್ ಹೇಳಿದ್ದಾರೆ.

‘ಗೋವಾದಲ್ಲಿದ್ದಾಗ ಪೀಟರ್ ಪೌಲ್ ಅವರ ಸಹೋದರಿಗೆ ಅನಾರೋಗ್ಯ ಆಗಿರೋದು ಗೊತ್ತಾಯ್ತು. ಆಗಲೇ ಪೀಟರ್ ಪೌಲ್ ಅವರು ಮದ್ಯವ್ಯಸನಿ ಅಂತ ಗೊತ್ತಾಗಿದ್ದು. ಆಮೇಲೆ ಇದೇ ವಿಚಾರಕ್ಕೆ ಪೀಟರ್ ಜೊತೆ ಜಗಳ ಆಡಿಕೊಂಡು ನಾನು ಚೆನ್ನೈಗೆ ವಾಪಸ್ ಬಂದೆ. ಚೆನ್ನೈಗೆ ಬಂದ ನಂತರ ಪೀಟರ್ ಸಹೋದರ ತೀರಿಕೊಂಡರು, ಅವರನ್ನು ನೋಡಿಕೊಂಡು ಬನ್ನಿ ಅಂತ ನಾನು ದುಡ್ಡು ಕೊಟ್ಟು ಕಳುಹಿಸಿದ್ದೆ. ಆಮೇಲೆ ಅವರು ಕೆಲದಿನಗಳ ಕಾಲ ಮನೆಯಿಂದ ಹೊರಗೆ ಇದ್ದರು. ನನ್ನ ಫೋನ್ ರಿಸೀವ್ ಮಾಡಲಿಲ್ಲ. ಅವರೇ ಕಾಲ್ ಕೂಡ ಮಾಡಲಿಲ್ಲ’ ಎಂದು ವನಿತಾ ಹೇಳಿದ್ದಾರೆ.

‘ಈಗ ಅವರು ಮೊದಲ ಪತ್ನಿ ಜೊತೆಗಿದ್ದಾರೆ. ಅವರ ಜೊತೆ ಇರ್ತಾರೆ ಅಂತ ಅಂದರೆ ನನಗೆ ಯಾವುದೇ ಸಮಸ್ಯೆಯಿಲ್ಲ. ಪೀಟರ್ ಮೊದಲ ಪತ್ನಿ ಎಲಿಜಬೆತ್ ಹೇಳಿದ್ದು ಎಲ್ಲವೂ ಸತ್ಯ. ಅವರ ನೋವನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಅಧಿಕೃತವಾಗಿ ಪತ್ನಿಯಾಗಿರುವ ಎಲಿಜಬೆತ್ ಅವರು ಪೀಟರ್ ಸರ್ಜರಿ ಮಾಡುವಾಗ ಪೇಪರ್‌ಗೆ ಸಹಿ ಮಾಡಲು ಬರಬೇಕಿತ್ತು, ನನ್ನ ಹೃದಯ ಒಡೆದಿದೆ. ಆದರೆ ನನ್ನ ಮಕ್ಕಳಿಗೋಸ್ಕರ ನಾನು ಮುಂದೆ ಸಾಗಬೇಕು’ ಎಂದು ವನಿತಾ ವಿಜಯ್‌ಕುಮಾರ್ ಹೇಳಿದ್ದಾರೆ.

Comments are closed.