ಮನೋರಂಜನೆ

ಸಿನಿಮಾ ಇಂಡಸ್ಟ್ರೀಗೆ ಬಂದು 17 ಗರ್ಲ್ಡ್​​ಫ್ರೆಂಡ್ಸ್​​ ಚೇಂಜ್ ಮಾಡಿದ ರಜನಿಕಾಂತ್ ಅಳಿಯ: ನಟಿ ಕೀರ್ತಿ ಸುರೇಶ್​ ಜೊತೆಗಿನ ಕಿಸ್ಸಿಂಗ್ ಪೋಟೋ ಭಾರೀ ವೈರಲ್

Pinterest LinkedIn Tumblr


ಕೊಲವೆರಿ ಡೀ ಹಾಡಿಂದ ರಾತ್ರೋರಾತ್ರಿ ಸ್ಟಾರ್​ ಸಂಗೀತ ನಿರ್ದೆಶಕ ಅನಿರುದ್ದ್ ಗೆ ಈಗ 30 ವರ್ಷ. ಇಂಡಸ್ಟ್ರಿಗೆ ಬಂದು ಆರೇಳು ವರ್ಷಗಳಲ್ಲೇ ಹದಿನೇಳು ಗರ್ಲ್ಡ್​​ಫ್ರೆಂಡ್ಸ್​​ ಚೇಂಜ್ ಮಾಡಿದ್ದಾನೆ. ಈಗ ಮಹಾನಟಿ ಅನ್ನಿಸಿಕೊಂಡ ಕೀರ್ತಿ ಸುರೇಶ್​ ಜೊತೆಗಿನ ಫೋಟೊ ಎಲ್ಲರ ಹುಬ್ಬನ್ನ ಮೇಲೆ ಕೆಳಗೆ ಆಡಿಸುವಂತೆ ಮಾಡ್ತಿದೆ.

ಈ ಫೋಟೊ ಲೀಕಾಗಿ ಇಡೀ ಇಂಡಸ್ಟ್ರಿಯಲ್ಲಿ ಅಲ್ಲೋ ಕಲ್ಲೋಲ ಆಗೋಗಿತ್ತು. ಯಾಕಂದ್ರೆ ಈ ಫೋಟೊ ಎರಡು ವರ್ಷ ಹಳೇದು ಅಂತ ಆ್ಯಂಡ್ರಿಯ ಹೇಳಿದಾಗ ಅವ್ರು ಒಂದು ಮಟ್ಟದ ಹೀರೋಯಿನ್ ಆಗಿದ್ರು. ಅನಿರುದ್ಧ್​​ ಅಂತೂ ಕೊಲವೇರಿ ಡೀ ಹಾಡಿಂದ ಓವರ್​ನೈಟ್​ ಸ್ಟಾರ್​ ಆಗ್ಬಿಟ್ಟಿದ್ದ.

ಸೂಪರ್​​ ಸ್ಟಾರ್​ ರಜನಿಕಾಂತ್​ ಅವ್ರ ಮಡದಿ ಲತಾ ರಜನಿಕಾಂತ್​ ಅಣ್ಣನ ಮಗನೇ ಈ ಅನಿರುದ್ಧ್​​ ರವಿಚಂದರ್. ಹಾಗಾಗೆ ಧನುಷ್ ಅಭಿನಯದ ರಜನಿ ಪುತ್ರಿ ನಿರ್ದೇಶನದ ಈ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಅನಿರುದ್ಧ್​​ ಆಯ್ಕೆಯಾಗಿದ್ದು. ಅನಿರುದ್ಧ್​ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್​ ಆಗೊ ಹೊತ್ತಿಗೆ ಆ್ಯಂಡ್ರಿಯಾ ಚಿತ್ರರಂಗದಲ್ಲಿ ಅಂಬೆಗಾಲಿಡ್ತಿದ್ದ ಕಂದಮ್ಮ, ಹಾಗಾಗಿ ಆಕೆಗೂ ಒಂದಷ್ಟು ಆಸೆ ಅವಕಾಶಗಳು ಬೇಕಿತ್ತು. ಆಗ ರಜನಿ ಮನೆಯ ಈ ಕಳ್​ ಬೆಕ್ಕಿಗೆ ಹಸಿವಾಗಿತ್ತು, ಅತ್ತ ಮೊಸರೂ ಹೆಪ್ಪಾಗಿತ್ತು. ಬಟ್ಟಲು ಬಗ್ಸ್​ಕೊಂಡು ಅನ್ನಕ್ಕೆ ಕಲ್ಸ್​​ಕೊಂಡು ಅಣ್ಣ ಬಾಯ್ಗಿಡೋದೊಂದೆ ಬಾಕಿ ಇತ್ತು.

ಅನಿರುದ್ಧ್ ಮತ್ತು ಆ್ಯಂಡ್ರಿಯಾ ಲವ್​ ಚ್ಯಾಪ್ಟ್ರು ಮುಗೀತಿದ್ದಂತೆ, ಅನಿರುದ್ಧನ ಪಬ್ಬು ಮಬ್ಬಿನ ಫೋಟೊಗಳೆಲ್ಲಾ ಒಂದೊಂದಾಗೆ ಸೋಷಿಯಲ್ ಮೀಡಿಯಾದಲ್ಲಿ ಕಾಣ್ಸ್​​ಕೊಳ್ಳೋಕೆ ಆರಂಭವಾಯ್ತು. ಹಾಗೆ ಎಲ್ಲರೂ ಕಣ್​ಗುಡ್ಡೆ ಆಚೆ ತಗಂಡು ನೋಡಿದ್ದು ಶೃತಿ ಹಾಸನ್ ಜೊತೆಗಿನ ಫೋಟೊಗಳನ್ನ.​​

ಕನ್ನಡದ ವಿಲನ್ ಸಿನಿಮಾದಲ್ಲಿ ನಟಿಸಿದ್ದ ಆ್ಯಮಿ ಅನ್ನೊ ಈ ಆಮದು ವೈಟ್​​ ಚಾಕ್​ಪೀಸು ಅದ್ಯಾವ ಆ್ಯಂಗಲ್​ನಿಂದ ಸುಂದ್ರಿನೊ ಏನೊ. ಒಟ್ನಲ್ಲಿ ನಮ್ಮವಂತೂ ಎದ್ದು ಬಿದ್ದು ಆಯಮ್ಮನ್ನೇ ಕರ್ಕೊಂಡ್​ ಬಂದು ಆ್ಯಕ್ಟಿಂಗ್ ಮಾಡ್ಸ್​​ತಾರೆ. ಆ ವಿಷ್ಯ ಹಂಗಹಿರ್ಲಿ ಈ ಆ್ಯಮಿ ಜೊತೆಗೂ ಅನಿರುದ್ಧ್​ ಅವ್ರು ಸಯಾಮಿ ಪೋಸ್​ ಕೊಟ್ಟಿದ್ರು. ಈ ಹುಡುಗ ಯಾರ್​ ಜೊತೆ ಫೋಟೊ ತೆಗ್ಸ್​​​ಕೊಂಡ್ರು ದೂರ್ದೂರ ನಿಂತ್ಕೊಂಡ್​ ತೆಗ್ಸ್​​ಕಣಲ್ಲ, ಎಲ್ಲ ಅಂಟಂಟ್ಕಂಡಿರೊ ಫೋಟೊಗಳೇ ಸಿಕ್ತವೆ.

ಇದೀಗ ಶಾಕಿಂಗ್​ & ಬ್ರೇಕಿಂಗ್​ ನ್ಯೂಸ್​ನಂತೆ ಕೀರ್ತಿ ಸುರೇಶ್​ ಜೊತೆಗಿನ ಫೋಟೊಗಳು ವೈರಲ್ ಆಗ್ತಾ ಇವೆ.. ಕೀರ್ತಿ ಒಬ್ಬರು ಮಹಾನಟಿ ಅಂತೆಲ್ಲಾ ಮಹಾಜನಗಳು ಮಹಾಮಾಧ್ಯಮಗಳು ಕರೆದಿದ್ದು ಇವ್ರನ್ನೇನಾ ಅನ್ನೊ ಪ್ರಶ್ನೆ ಮೂಡ್ತಾ ಇದೆ.ಆದ್ರೆ ಈ ಫೋಟೊಗಳು ಕೀರ್ತಿ ಸುರೇಶ್​ ಅವ್ರ ಹುಟ್ಟುಹಬ್ಬದ ಪಾರ್ಟಿಯಂದು ತೆಗೆದವು ಅಂತಲೂ ಇನ್ನೊಂದು ಮಾಹಿತಿ ಹೇಳ್ತಾ ಇದೆ. ಏನಾದ್ರಾಗ್ಲಿ ಇನ್ಮುಂದೆ ಅನಿರುದ್ಧ್​ ಜೊತೆ ಫೋಟೊ ತೆಗೆಸಿಕೊಳ್ವಾಗ 6 ಫೀಟ್​​ ಡಿಸ್ಟೆನ್ಸ್​​ ಮೇಂಟೈನ್ ಮಾಡೋದು ಒಳ್ಳೇದು, ಸೆಕೆಂಡ್​ ಲೇಟಾದ್ರು ದಬುಕ್​ ಅಂತ ತಬ್ಕೊಂಡ್​ಬಿಡ್ತಾನೆ ನರಪೇತಲ ನಾರಾಯಣ.

Comments are closed.