ಮನೋರಂಜನೆ

ಪುನೀತ್ ನಟನೆಯ ‘ಜೇಮ್ಸ್​​​’ಗೆ ಆಯ್ಕೆಯಾದ ನಾಯಕಿ​​​..!

Pinterest LinkedIn Tumblr


ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​​ ‘ಯುವರತ್ನ’ ಚಿತ್ರೀಕರಣ ಮುಗಿಸಿ ಜೇಮ್ಸ್​​ ಚಿತ್ರೀಕರಣಕ್ಕೆ ಪ್ರವೇಶ ಮಾಡಿದ್ದಾರೆ. ಇದರ ಬೆನ್ನಲ್ಲೇ ಈ ಚಿತ್ರಕ್ಕೆ ನಾಯಕಿ ಆಯ್ಕೆಯು ಫಿಕ್ಸ್ ಆಗಿದೆ.

ಅಪ್ಪು ನಟನೆಯ ಮೋಸ್ಟ್​ ಅವೈಟೆಡ್​​ ‘ಯುವರತ್ನ’ ಸಿನಿಮಾದ ಶೂಟಿಂಗ್​ ಮುಗಿಸಿ, ಪವರ್​ಫುಲ್​​ ಜೇಮ್ಸ್​ ಅಡ್ಡಕ್ಕೆ ಪವರ್ ಸ್ಟಾರ್​ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಮೋಷನ್​ ಪೋಸ್ಟರ್​ನಿಂದಲೇ ಗಾಂಧಿನಗರದಲ್ಲಿ ಕಿಕ್​ ಏರಿಸಿರೋ ‘ಜೇಮ್ಸ್​​’ ಶೂಟಿಂಗ್​ ಹೊಸಪೇಟೆಯಲ್ಲಿ ಶುರುವಾಗಿದೆ.

ಈಗಾಗಲೇ ಭರದಿಂದ ಸಾಗುತ್ತಿರುವ ಜೇಮ್ಸ್​ ಶೂಟಿಂಗ್​ಗೆ, ಒಬ್ಬೊಬ್ಬರಾಗಿ ಕಲಾವಿದರು ಎಂಟ್ರಿ ಕೊಡ್ತಿದ್ದಾರೆ. ಹೌದು ‘ದಿ ವಿಲನ್​​’ ಸಿನಿಮಾದಲ್ಲಿ ಮಿಂಚಿರುವಂತಹ ಟಾಲಿವುಡ್​ ಶ್ರೀಕಾಂತ್​​, ಅಪ್ಪು ಜೊತೆ ಮೋಡಿ ಮಾಡಲಿದ್ದಾರೆ . ಇದಲ್ಲದೇ ಬಹುಭಾಷಾ ನಟ ಆದಿತ್ಯ ಮೆನನ್, ಅನು ಪ್ರಭಾಕರ್​ ಸೇರಿದಂತೆ ಅನೇಕ ಕಲಾವಿದರು ಲಿಡ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಭರ್ಜರಿ’ ಚೇತನ್​ ಕುಮಾರ್​ ಸಾರಥ್ಯದಲ್ಲಿ ಮೂಡಿಬರ್ತಿರುವ ಸಿನಿಮಾದಲ್ಲಿ, ಅಪ್ಪುಗೆ ನಾಯಕಿ ಫಿಕ್ಸ್​ ಆಗಿದ್ದಾರೆ. ಯೆಸ್​ ಪುನೀತ್​​ ಜೊತೆ ‘ರಾಜಕುಮಾರ’ ಸಿನಿಮಾದಲ್ಲಿ ಕಮಾಲ್​ ಮಾಡಿರುವಂತಹ ಪ್ರಿಯಾ ಆನಂದ್​​, ‘ಜೇಮ್ಸ್​​’ ಸಿನಿಮಾ ಮೂಲಕ ಮತ್ತೆ ಅಪ್ಪು ಜೊತೆ ಡುಯೇಟ್​ ಹಾಡಲು ರೆಡಿಯಾಗಿದ್ದಾರೆ.

ಸದ್ಯ ಜೇಮ್ಸ್​ ಶೂಟಿಂಗ್​ ಶುರುವಾಗಿದ್ದು, ಸದ್ಯದಲ್ಲಿಯೇ ಪ್ರಿಯಾ ಆನಂದ್​ ಜೇಮ್ಸ್​​ ಸೆಟ್​ಗೆ ಸೇರಿಕೊಳ್ಳಲಿದ್ದಾರೆ. ಈ ವಿಷಯ ಕೇಳಿದ ಅಪ್ಪು ಫ್ಯಾನ್ಸ್​ ಫುಲ್​ ಥ್ರಿಲ್​ ಆಗಿದ್ದು, ಇವರಿಬ್ಬರ ಜೋಡಿಯನ್ನ ಮತ್ತೆ ತೆರೆ ಮೇಲೆ ನೋಡಲು ಸಖತ್​ ಎಕ್ಸೈಟ್​​ ಆಗಿದ್ದಾರೆ. ಎನಿ ವೇ ಮತ್ತೆ ಅಪ್ಪು-ಪ್ರಿಯಾ ಜೋಡಿ ಬಿಗ್​ ಸ್ಕ್ರೀನ್​ ಮೇಲೆ ಮೋಡಿ ಮಾಡುತ್ತಾ ಅಂತ ಕಾದುನೋಡಬೇಕಾಗಿದೆ.

Comments are closed.