ಮನೋರಂಜನೆ

ಕುಂಕುಮ ಭಾಗ್ಯ’ ಧಾರಾವಾಹಿಯ ನಟಿ ಹೃದಯಾಘಾತದಿಂದ ವಿಧಿವಶ!

Pinterest LinkedIn Tumblr


ಮುಂಬೈ: ಹಿಂದಿ ಕಿರುತೆರೆಯ ನಟಿ ಜರೀನಾ ರೋಷನ್‌ ವಿಧಿವಶರಾದರು. 54 ವರ್ಷ ವಯಸ್ಸಿನ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆಂದು ವರದಿಯಾಗಿದೆ.

‘ಕುಂಕುಮ ಭಾಗ್ಯ’, ‘ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’ ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಜರೀನ್‌ ನಟಿಸಿದ್ದರು.

‘ಕುಂಕುಮ ಭಾಗ್ಯ’ ಧಾರಾವಾಹಿಯಲ್ಲಿ ಜರೀನಾ ನಿಭಾಯಿಸುತ್ತಿದ್ದ ಇಂದೂ ಸೂರಿ ಅಥವಾ ಇಂದೂ ದೇಸಾಯಿ ಎಂಬ ಪಾತ್ರ ತುಂಬ ಜನಪ್ರಿಯವಾಗಿತ್ತು. ಈ ಧಾರಾವಾಹಿಯಲ್ಲಿ ಅವರ ಜೊತೆ ತೆರೆಹಂಚಿಕೊಂಡಿದ್ದ ಶಬೀರ್‌ ಅಹ್ಲುವಾಲಿಯಾ ಮತ್ತು ಶ್ರೀತಿ ಜಾ ಸೋಶಿಯಲ್‌ ಮೀಡಿಯಾ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘ಜರೀನಾ ನಿಧನದ ಶಾಕಿಂಗ್‌ ಸುದ್ದಿ ನಿಜ. ಅವರು ತುಂಬ ಒಳ್ಳೆಯ ಮಹಿಳೆ ಆಗಿದ್ದರು. ಅಪಾರ ಜೀವನೋತ್ಸಾಹ ಹೊಂದಿದ್ದರು. ಈ ವಯಸ್ಸಿನಲ್ಲೂ ಅವರು ಎನರ್ಜಿಟಿಕ್‌ ಆಗಿರುತ್ತಿದ್ದರು. ಒಬ್ಬ ಫೈಟರ್‌ ರೀತಿ ಇದ್ದರು. ಕಳೆದ ತಿಂಗಳು ಕೂಡ ಅವರ ಜೊತೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ. ತುಂಬ ಆರೋಗ್ಯವಾಗಿದ್ದರು. ಆದರೆ ಈಗ ಅವರ ಸಾವಿನ ಸುದ್ದಿ ಸಡನ್‌ ಆಗಿ ಕೇಳಿಬಂತು’ ಎಂದಿದ್ದಾರೆ ‘ಕುಂಕುಮ ಭಾಗ್ಯ’ ಧಾರಾವಾಹಿ ನಟ ಅನುರಾಗ್‌ ಶರ್ಮಾ.

Comments are closed.