ಮನೋರಂಜನೆ

ಎದೆಸೀಳುವ ಉಡುಪಿಗೆ ಅಶ್ಲೀಲ ಕಾಮೆಂಟ್: ತರಾಟೆಗೆ ತೆಗೆದುಕೊಂಡ ಕಣ್ಸನ್ನೆ ಬೆಡಗಿ!

Pinterest LinkedIn Tumblr


ತಿರುವನಂತಪುರಂ: ಎದೆಸೀಳುವ ಉಡುಪು ಧರಿಸಿದ್ದಕ್ಕೆ ಅಶ್ಲೀಲ ಕಾಮೆಂಟ್ ಮಾಡಿದ ನೆಟ್ಟಿಗರನ್ನು ನಟಿ ಪ್ರಿಯಾ ವಾರಿಯರ್ ತರಾಟೆಗೆ ತೆಗೆದುಕೊಂಡಿದ್ದಾರೆ..

ಸಾಂಪ್ರದಾಯಿಕ ಉಡುಗೆ, ಆಭರಣ ಧರಿಸಿ ಪ್ರಿಯಾ ವಾರಿಯರ್ ಇತ್ತೀಚೆಗಷ್ಟೇ ಫೋಟೋಶೂಟ್ ಮಾಡಿಸಿದ್ದರು. ಆದರೆ ಆ ಡ್ರೆಸ್‌ನ ಬ್ಲೌಸ್ ಎದೆಸೀಳುವಂತೆ ರೆಡಿಯಾಗಿತ್ತು. ಇದನ್ನು ನೋಡಿದ ನೆಟ್ಟಿಗರು ಪ್ರಿಯಾಗೆ ಬಾಯಿಗೆ ಬಂದಹಾಗೆ ಬೈಯ್ದಿದ್ದಾರೆ. ಒಟ್ಟಾರೆಯಾಗಿ ಪ್ರಿಯಾ ತುಂಬ ವಿಭಿನ್ನವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದನ್ನು ನೋಡಿದ ಕೆಲವರು ಪ್ರಿಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕಾಮೆಂಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪ್ರಿಯಾ, ‘ಹೇಯ್ ..ನಿಮ್ಮ ಎಲ್ಲ ಕಾಮೆಂಟ್‌ಗಳನ್ನು ನಾನು ಓದಿದ್ದೇನೆ. ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡಿದವರೆಲ್ಲರಿಗೂ ಚಪ್ಪಾಳೆ ತಟ್ಟಲೇಬೇಕು. ಇಷ್ಟೆಲ್ಲ ಏರಿಳಿತವನ್ನು ದಾಟಿಕೊಂಡು ನಾನು ಇಲ್ಲಿವರೆಗೆ ಬಂದಿದ್ದೇನೆ. ಇದು ನನಗೆ ಹೆಮ್ಮೆಪಡುವ ವಿಷಯ. ಈ ರೀತಿ ಬೆದರಿಕೆ ಹಾಕುವವರನ್ನು ನಾನು ಪ್ರತಿನಿತ್ಯ ನೋಡುತ್ತೇನೆ. ಅದರಿಂದ ಏನೂ ಸಾಧ್ಯವಾಗದು. ಮೊದಲು ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ’ ಎಂದು ಪ್ರಿಯಾ ವಾರಿಯರ್ ಪ್ರತಿಕ್ರಿಯೆ ನೀಡಿದ್ದಾರೆ.

‘ಒರು ಆಡಾರ್ ಲವ್’ ಸಿನಿಮಾದಲ್ಲಿ ಕಣ್ಸನ್ನೆ ಮಾಡುವ ಮೂಲಕ ಒಂದೇ ರಾತ್ರಿಯಲ್ಲಿ ನ್ಯಾಶನಲ್ ಸ್ಟಾರ್ ಆದ ಪ್ರಿಯಾ ವಾರಿಯರ್ ಅವರು ವಿಶ್ವದಾದ್ಯಂತ ಪ್ರಖ್ಯಾತಿ ಗಳಿಸಿದರು. ನಾಯಕಿಯಾಗಿ ಪ್ರಿಯಾಗೆ ದೊಡ್ಡಮಟ್ಟದಲ್ಲಿ ಇನ್ನೂ ಬ್ರೇಕ್ ಸಿಕ್ಕಿಲ್ಲ. ತೆಲುಗು ನಟ ನಿತಿನ್ ಅವರ ಚೆಕ್ ಸಿನಿಮಾಕ್ಕೆ ರಾಕುಲ್ ಪ್ರೀತ್ ಸಿಂಗ್ ಜೊತೆಗೆ ಪ್ರಿಯಾ ವಾರಿಯರ್ ಕೂಡ ನಟಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಒಬ್ಬ ಸ್ಟಾರ್ ನಟನ ಜೊತೆಗೆ ನಟಿಸುವ ಅವಕಾಶ ಪ್ರಿಯಾಗೆ ಸಿಕ್ಕಿರುವುದು. ‘ಚೆಕ್‌’ ಚಿತ್ರವನ್ನು ವಿ. ಆನಂದ್ ಪ್ರಸಾದ್‌ ನಿರ್ಮಾಣ ಮಾಡಿದ್ದಾರೆ. ಪ್ರಿಯಾ ವಾರಿಯರ್ ಅಭಿನಯದ ‘ಶ್ರೀದೇವಿ ಬಂಗ್ಲೋ’ ಇನ್ನೂ ತೆರೆಕಂಡಿಲ್ಲ. ಕನ್ನಡದಲ್ಲಿ ಪ್ರಿಯಾ, ಶ್ರೇಯಸ್ ಮಂಜು ಜೊತೆ ‘ವಿಷ್ಣುಪ್ರಿಯ’ ಸಿನಿಮಾ ಮಾಡುತ್ತಿದ್ದಾರೆ.

Comments are closed.