
ನವದೆಹಲಿ: ಆನ್ ಲೈನ್ ಹುಡುಕಾಟದಲ್ಲಿ ದೇಶದ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿಗಳ ಟಾಪ್ 10 ಪಟ್ಟಿಯಲ್ಲಿ ಬಾಲಿವುಡ್ ತಾರೆಗಳಾದ ಟಬು, ತಾಪ್ಸೀ ಪನ್ನು, ಅನುಷ್ಕಾ ಶರ್ಮಾ ಮತ್ತು ಸೋನಾಕ್ಷಿ ಸಿನ್ಹಾ ಸ್ಥಾನ ಪಡೆದಿದ್ದಾರೆ. ಆದರೆ,ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಟಬು ನಂಬರ್ 2 ಸ್ಥಾನದಲ್ಲಿದ್ದು, ತಾಪ್ಸಿ ಪನ್ನು 3, ನಟ ನಿರ್ಮಾಪಕ ಶರ್ಮಾ 4 ಹಾಗೂ ಸಿನ್ಹಾ 5ನೇ ಸ್ಥಾನದಲ್ಲಿದ್ದಾರೆ. ಗಾಯಕ ಅರ್ಮಾನ್ ಮಲ್ಲಿಕ್ 6, ನಟಿ ಸಾರಾ ಅಲಿಖಾನ್ 7 ಧಾರವಾಹಿ ಸ್ಟಾರ್ ದಿವ್ಯಾಂಕ ತ್ರಿಪಾಠಿ 8ನೇ ಸ್ಥಾನದಲ್ಲಿದ್ದಾರೆ. ಸೂಪರ್ ಸ್ಟಾರ್ ಶಾರೂಖ್ ಖಾನ್ 9, ಹಿನ್ನೆಲೆ ಗಾಯಕ ಅರ್ಜಿತ್ ಸಿಂಗ್ 10ನೇ ಸ್ಥಾನದಲ್ಲಿದ್ದಾರೆ.
ದುರುದ್ದೇಶ ಪೂರಿತ ವೆಬ್ ಸೈಟ್ ಗಳು ಮತ್ತು ವೈರಸ್ ನಂಟಿನಿಂದ ಈ ತಾರೆಯರ ಹೆಸರುಗಳು ಅಗ್ರಸ್ಥಾನದಲ್ಲಿರುವುದಾಗಿ ಪಟ್ಟಿಯನ್ನು ಬಿಡುಗಡೆ ಮಾಡಿರುವ ಸೈಬರ್ ಸೆಕ್ಯುರಿಟಿ ಕಂಪನಿಯೊಂದು ಮಂಗಳವಾರ ತಿಳಿಸಿದೆ.
ಗ್ರಾಹಕರು ಎಂದೆಂದಿಗಿಂತಲೂ ಈಗ ಉಚಿತ ಮನರಂಜನೆಗಾಗಿ ವೆಬ್ ಜಾಲಡುತ್ತಿದ್ದು, ಇದನ್ನೇ ಸೈಬರ್ ಅಪರಾಧಿಗಳು ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು Mcafee ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವೆಂಕಟ್ ಕೃಷ್ಣಾಪುರ್ ಹೇಳಿದ್ದಾರೆ.
Comments are closed.