ಹೈದರಾಬಾದ್: ನಟಿ ಸಮಂತಾ ಅಕ್ಕಿನೇನಿಗೆ ಪಾಕಿಸ್ತಾನದ ಭಯೋತ್ಪಾದಕರ ಜತೆ ನಂಟಿದೆ ಎಂಬ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ.
ಪಾಕಿಸ್ತಾನದ ಜತೆಗೆ ನಂಟು ಎಂದ ಮಾತ್ರಕ್ಕೆ ಅವರನ್ನು ಭಯೋತ್ಪಾದಕಿ ಎಂದು ಬಿಂಬಿಸಬೇಡಿ. ಏಕೆಂದರೆ, ಪಾಕಿಸ್ತಾನದ ಭಯೋತ್ಪಾದಕಿಯಾಗಿ ಅವರು ಕಾಣಿಸಿಕೊಂಡಿರುವುದು ಫ್ಯಾಮಿಲಿ ಮ್ಯಾನ್ 2 ವೆಬ್ಸರಣಿಯಲ್ಲಿ. ಹೌದು. ಈಗಾಗಲೇ ಫ್ಯಾಮಿಲಿ ಮ್ಯಾನ್ ಮೊದಲ ಸೀಸನ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಅದರ ಮುಂದುವರಿದ ಭಾಗವಾಗಿ ಸೀಸನ್ ಎರಡರಲ್ಲಿ ಸಮಂತಾ ನಟಿಸಿದ್ದಾರೆ.
ಇಲ್ಲಿಯವರೆಗೂ ಅವರ ಪಾತ್ರ ನೆಗೆಟಿವ್ ರೀತಿಯಲ್ಲಿ ಇರಲಿದೆ ಎಂದೇ ಹೇಳಲಾಗಿತ್ತು. ಆದರೆ, ಪಾತ್ರದ ಗುಟ್ಟು ರಟ್ಟಾಗಿರಲಿಲ್ಲ. ಇದೀಗ ತಂಡದ ಮೂಲಗಳ ಪ್ರಕಾರ ಪಾಕಿಸ್ತಾನದ ಭಯೋತ್ಪಾದಕಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಶುಕ್ರವಾರವಷ್ಟೇ ಪೂರ್ತಿ ಶೂಟಿಂಗ್ ಸಹ ಮುಗಿದಿದ್ದು, ಇನ್ನೇನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.
ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ ದಿ ಫ್ಯಾಮಿಲಿ ಮ್ಯಾನ್ 2 ಸಿದ್ಧವಾಗಿದ್ದು, ಮನೋಜ್ ಬಾಜಪೇಯಿ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಿಯಾಮಣಿ ಸಹ ವೆಬ್ಸಿರೀಸ್ನಲ್ಲಿದ್ದಾರೆ.