ಮನೋರಂಜನೆ

ಪ್ರಿಯತಮನ ಹುಟ್ಟು ಹಬ್ಬಕ್ಕೆ ನಟಿ ನಯನಾ ತಾರಾ ಮಾಡಿದ ಖರ್ಚು ಎಷ್ಟು ಗೊತ್ತಾ?

Pinterest LinkedIn Tumblr


ಚೆನ್ನೈ: ನಟಿ​ ನಯನತಾರಾ, ಪ್ರಿಯತಮ​ ವಿಘ್ನೇಶ್​ ಶಿವನ್​ ವಿಘ್ನೇಶ್​ ಹುಟ್ಟುಹಬ್ಬವನ್ನು ಗೋವಾದಲ್ಲಿ ನಯನಾ ಅದ್ದೂರಿಯಾಗಿ ಆಚರಿಸಿರುವ ಸುದ್ದಿ ಈಗ ಭಾರೀ ವೈರಲ್ ಆಗಿದೆ.

ಬರ್ತಡೇ ಸಂಬಂಧಿಸಿದ ಬಿಸಿ ಬಿಸಿ ಸುದ್ದಿಯೊಂದು ಕಾಲಿವುಡ್​ ಮೂಲಗಳಿಂದ ಕೇಳಿಬಂದಿದೆ. ಅಂದಹಾಗೆ ನಯನಾ, ತಮ್ಮ ಭಾವಿ ಪತಿಯ ಹುಟ್ಟಹಬ್ಬಕ್ಕೆ ಭಾರಿ ಹಣವನ್ನೇ ಖರ್ಚು ಮಾಡಿದ್ದಾರೆಂದು ತಿಳಿದುಬಂದಿದೆ. ಮೂರು ದಿನಗಳ ಗೋವಾ ಪ್ರವಾಸಕ್ಕಾಗಿ ನಯನಾ ಬರೋಬ್ಬರಿ 25 ಲಕ್ಷ ರೂ. ಖರ್ಚು ಮಾಡಿದ್ದಾರೆಂದು ತಮಿಳು ಚಿತ್ರರಂಗದಲ್ಲಿ ಬಹು ಚರ್ಚೆಯ ವಿಷಯವಾಗಿದೆ.

ವಿಘ್ನೇಶ್ ತಮ್ಮ​ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಭಾವಿ ಪತಿಗೆ ನಯನಾ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಸದ್ಯ ಪ್ರಣಯ ಪಕ್ಷಿಗಳಾಗಿರುವ ನಯನಾ ಮತ್ತು ವಿಘ್ನೇಶ್​, ಕಾಲಿವುಡ್​ನ ಸ್ಟಾರ್​ ಜೋಡಿಗಳಾಗಿದ್ದಾರೆ. ನಾಲ್ಕು ವರ್ಷಗಳಿಂದ ಡೇಟಿಂಗ್​ ಮೂಡ್​ನಲ್ಲಿರುವ ಜೋಡಿ, ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು. ಆದರೆ, ಇದನ್ನು ತಳ್ಳಿಹಾಕಿರುವ ಜೋಡಿ ನಮ್ಮ ಮದುವೆ ಇನ್ನು ನಿಶ್ಚಯವಾಗಿಲ್ಲ. ಆದರೆ, ಯಾವುದೇ ಸಮಯದಲ್ಲೂ ನಡೆಯಬಹುದು ಎಂದು ಸ್ಪಷ್ಟನೆ ನೀಡಿದ್ದರು.

Comments are closed.