ಮನೋರಂಜನೆ

ನಟಿ ರಮ್ಯಾ ಕೃಷ್ಣನ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ?: ದಕ್ಷಿಣ ಭಾರತದ ನಟಿಯರ ಸಂಭಾವನೆಗಿಂತ ಅಧಿಕ

Pinterest LinkedIn Tumblr


ನವದೆಹಲಿ: ನಟಿ ರಮ್ಯಾ ಕೃಷ್ಣನ್ ಅವರಿಗೆ ಇಂದು 50 ವರ್ಷ ತುಂಬಿದೆ. ತಮ್ಮ 50ನೇ ವಯಸ್ಸಿನ ಜನ್ಮ ದಿನಾಚರಣೆ ಸಂಭ್ರಮದಲ್ಲಿರುವ ರಮ್ಯಾ ಕೃಷ್ಣನ್ ದಕ್ಷಿಣದ ಉನ್ನತ ನಟಿಯರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ದಕ್ಷಿಣ ಚಿತ್ರರಂಗದ ಸೂಪರ್ ಹಿಟ್ ಚಿತ್ರ ‘ಬಾಹುಬಲಿ’ ನಲ್ಲಿ ಕೆಲಸ ಮಾಡುವ ಎಲ್ಲ ನಟರಿಗೆ ಇಂದು ಜಗತ್ತಿನಲ್ಲಿ ಹೊಸ ಗುರುತು ಸಿಕ್ಕಿದೆ. ಚಿತ್ರ ಹಿಟ್ ಆದಾಗಿನಿಂದ ಚಿತ್ರದಲ್ಲಿ ಕೆಲಸ ಮಾಡುವ ಎಲ್ಲ ನಟರ ಶುಲ್ಕವೂ ಹೆಚ್ಚಾಗಿದೆ ಮತ್ತು ಅವರಲ್ಲಿ ಒಬ್ಬರು ರಮ್ಯಾ ಕೃಷ್ಣನ್. ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಎರಡರಲ್ಲೂ ‘ಶಿವಗಾಮಿ ದೇವಿ’ ಪಾತ್ರಕ್ಕೆ ರಮ್ಯಾ ಕೃಷ್ಣನ್ ಜೀವ ತುಂಬಿದ್ದಾರೆ. ಚಿತ್ರದಲ್ಲಿ ‘ಶಿವಗಾಮಿದೇವಿಯಾಗಿ ಕಾಣಿಸಿಕೊಂಡ ರಮ್ಯಾ ಅವರ ಪಾತ್ರ ಪ್ರೇಕ್ಷಕರಿಗೆ ಹೆಚ್ಚು ಮೆಚ್ಚುಗೆಯಾಗಿದೆ. ವರದಿಗಳ ಪ್ರಕಾರ ಅದರ ಬಳಿಕ ರಮ್ಯಾ ಅವರ ಸಂಭಾವನೆಯನ್ನು ಹೆಚ್ಚಿಸಿದ್ದಾರೆ.

ಸಂಭಾವನೆ ಹೆಚ್ಚಳ:
ದಕ್ಷಿಣ ನಟಿ ತಮನ್ನಾ ಭಾಟಿಯಾ ಮತ್ತು ರಕುಲ್ ಪ್ರೀತ್ ಸಿಂಗ್ ಅವರಿಗಿಂತ ರಮ್ಯಾ ತಮ್ಮ ಚಿತ್ರಗಳಿಗೆ ಹೆಚ್ಚು ಶುಲ್ಕ ವಿಧಿಸುತ್ತಿದ್ದಾರೆ. ಇತ್ತೀಚೆಗೆ ಸುದ್ದಿ ವರದಿಯ ಪ್ರಕಾರ ತೆಲುಗು ಚಿತ್ರ ‘ಸೈಲಾಜಾ ರೆಡ್ಡಿ ಅಲ್ಲುಡು’ ಚಿತ್ರದಲ್ಲಿ ಕೆಲಸ ಮಾಡಲು ರಮ್ಯಾ ಒಂದು ದಿನದ ಶೂಟಿಂಗ್‌ಗೆ 6 ಲಕ್ಷ ರೂಪಾಯಿ ವಿಧಿಸಿದ್ದರು. ಈ ಚಿತ್ರಕ್ಕಾಗಿ 25 ದಿನಗಳ ಚಿತ್ರೀಕರಣಕ್ಕೆ ಒಪ್ಪಂದ ಮಾಡಲಾಗಿದೆ. ಈ ರೀತಿಯಾಗಿ ಅವರು 25 ದಿನಗಳವರೆಗೆ 1.50 ಕೋಟಿ ಸಂಭಾವನೆ ವಿಧಿಸಿದ್ದರು. ವಾಸ್ತವವಾಗಿ ರಮ್ಯಾ ಕೃಷ್ಣನ್ ಅವರ ಸಂಭಾವನೆ ದಕ್ಷಿಣ ಭಾರತದ ಇತರ ನಟಿಯರ ಸಂಭಾವನೆಗಿಂತ ಅಧಿಕ ಎಂದೇ ಹೇಳಲಾಗುತ್ತದೆ.

ರಮ್ಯಾ ಅವರು ಹಿಂದಿ ಚಿತ್ರಗಳಾದ ‘ಖಲ್ನಾಯಕ್’, ‘ಕ್ರಿಮಿನಲ್’, ‘ಶಪತ್’ ಮತ್ತು ‘ಬಡೆ ಮಿಯಾ ಚೋಟಿ ಮಿಯಾನ್’ ನಲ್ಲಿ ಕೆಲಸ ಮಾಡಿದ್ದಾರೆ.

Comments are closed.