ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಹೊಸ ಹೊಸ ತಿರುವು ಪಡೆಯುತ್ತಲೇ ಇದೆ. ಈಗ ಈ ಸಂಬಂಧ ಮತ್ತೋರ್ವ ನಟಿಯ ಬಂಧನವಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ನಟಿ ರಿಯಾ ಚಕ್ರವರ್ತಿಯ ಬಂಧನವಾಗಿದೆ. ಇಂದು ಮೂರನೇ ದಿನ ಎನ್‍ಸಿಬಿ ಅಧಿಕಾರಿಗಳ ಮುಂದೆ ರಿಯಾ ಚಕ್ರವರ್ತಿ ವಿಚಾರಣೆಗೆ ಹಾಜರಾಗಿದ್ದರು. ಹೆಚ್ಚಿನ ವಿಚಾರ ಹಿನ್ನೆಲೆ ರಿಯಾರನ್ನ ಎನ್‍ಸಿಬಿ ಬಂಧಿಸಿದೆ.
ಸುಶಾಂತ್ ಸಿಂಗ್ ರಜಪೂತ್ ನಿಧನ ಪ್ರಕರಣ ಡ್ರಗ್ಸ್ ತಿರುವು ಪಡೆದುಕೊಂಡಿತ್ತು. ರಿಯಾ ಚಕ್ರವರ್ತಿ ವಾಟ್ಸಪ್ ಸ್ಕ್ರೀನ್‍ಶಾಟ್ ಆಧರಿಸಿ ಎನ್‍ಸಿಬಿ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣ ಕೈಗೆತ್ತಿಕೊಂಡ ಎನ್‍ಸಿಬಿ ಈಗಾಗಲೇ ರಿಯಾ ಸೋದರ ಶೌವಿಕ್ ಚಕ್ರವರ್ತಿ, ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ್ ನನ್ನ ಅರೆಸ್ಟ್ ಮಾಡಿದೆ. ಶೌವಿಕ್ ಹೇಳಿಕೆಯನ್ನಾಧರಿಸಿ ಕೆಲವು ಸ್ಥಳಗಳ ಪರಿಶೀಲನೆ ಸಹ ಮಾಡಲಾಗುತ್ತಿದೆ.
ಇತ್ತ ಶೌವಿಕ್ ಬಂಧನದ ಬಳಿಕ ರಿಯಾ ಚಕ್ರವರ್ತಿ ಭಾನುವಾರ ಮತ್ತು ಸೋಮವಾರ ವಿಚಾರಣೆಗೆ ಹಾಜರಾಗಿದ್ದರು. ಇಂದು ಸಹ ವಿಚಾರಣೆಗೆ ಆಗಮಿಸಿದ್ದ ರಿಯಾ ಚಕ್ರವರ್ತಿಯನ್ನ ಬಂಧಿಸಲಾಗಿದೆ. ಇತ್ತ ಅಕ್ಕ ರಿಯಾಗಾಗಿ ತಾನು ಡ್ರಗ್ಸ್ ಖರೀದಿಸುತ್ತಿದ್ದೆ ಎಂದು ಶೌವಿಕ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಡಾರ್ಕ್ ನೆಟ್ ಮೂಲಕ ರಿಯಾ ಎಂಡಿಎಂಎ ಡ್ರಗ್ಸ್ ಖರೀದಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಭಾನುವಾರ ರಿಯಾ ಎನ್‍ಸಿಬಿ ವಿಚಾರಣೆಗೆ ಹಾಜರಾಗಿದ್ದ ವೇಳೆ ಮಾತನಾಡಿದ್ದ ನಟಿ ಪರ ವಕೀಲ ಮನಶ್ಚಿಂದ್, ಪ್ರೀತಿ ಮಾಡೋದು ತಪ್ಪು ಎಂದಾದ್ರೆ ನನ್ನ ಕಕ್ಷಿದಾರರಿಗೆ ಶಿಕ್ಷೆ ಆಗಲಿ. ರಿಯಾ ಚಕ್ರವರ್ತಿ ಮಾನಸಿಕವಾಗಿ ಬಂಧನಕ್ಕೆ ಸಿದ್ಧವಾಗಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದ್ದರು.
Comments are closed.