ಮನೋರಂಜನೆ

ಡ್ರಗ್ಸ್​​ ದಂಧೆಯ ಆರೋಪಿ ಯಾವ ನಟಿಯೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದಾರೆ ಗೊತ್ತಾ ?

Pinterest LinkedIn Tumblr


ಡ್ರಗ್ಸ್ ಜಾಲಕ್ಕೆ ಸ್ಯಾಂಡಲ್​ವುಡ್​ ಸಿಲುಕಿ ದೇಶಾದ್ಯಂತ ಸಂಚಲನ ಎದ್ದಿರೋ ಬೆನ್ನಲ್ಲೇ ಚಂದನವನದ ಡ್ರಗ್ಸ್ ದಂಧೆಯಲ್ಲಿ ಮತ್ತೊಬ್ಬ ಮಹಾನಟಿಯ ಬಾಯ್​ಫ್ರೆಂಡ್ ಹೆಸರು ಕೇಳಿ ಬರ್ತಿದ್ದು, ನಟಿಯ ಇನಿಯ ಪ್ರಶಾಂತ್​ ರಾಜುಗಾಗಿ ಸಿಸಿಬಿ ಹುಡುಕಾಟ ನಡೆಸಿದೆ.

ಡ್ರಗ್ಸ್ ಕೇಸ್​ FIR ನಲ್ಲಿ ಪ್ರಶಾಂತ್​ ರಾಜುವೇ A-8 ಆರೋಪಿಯಾಗಿದ್ದಾನೆ. ಹೀರೋಯಿನ್​ ಜೊತೆ ಲಿವಿಂಗ್ ಟುಗೆದರ್​ನಲ್ಲಿರೋ ಪ್ರಶಾಂತ್, ಹೊಸಕೆರೆಹಳ್ಳಿಯ ಅಪಾರ್ಟ್​ಮೆಂಟ್​​ನಲ್ಲಿ ವಾಸವಿದ್ದಾನೆ.

ಪ್ರಶಾಂತ್​ ಸದಾ ಪೂಜಿಸೋ ಆ ನಟಿಗೆ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ. ಬೆಂಗಳೂರಿನ ಶೇಕಡಾ 50ರಷ್ಟು ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡೋದೇ ಪ್ರಶಾಂತ್. ಪ್ರಶಾಂತ್ ಸಿಕ್ಕಿಬಿದ್ರೆ ನಟಿಗಷ್ಟೇ ಅಲ್ಲ, ಅರ್ಧ ಡಜನ್ IAS ಅಧಿಕಾರಿಗಳಿಗೂ ಸಂಕಷ್ಟ ಎದುರಾಗಲಿದೆ.

ಅಶೋಕ ಹೊಟೇಲ್​ನಲ್ಲಿ ಒಂದು ವರ್ಷ ರೂಂ ಮಾಡಿದ್ದ ಪ್ರಶಾಂತ್ ರಾಜು, IAS ಅಧಿಕಾರಿಗಳನ್ನು ಅಲ್ಲಿಗೆ ಕರೆಸಿ ಡ್ರಗ್ಸ್ ನೀಡ್ತಿದ್ದ ಅನ್ನೋ ಮಾಹಿತಿ ಇದೆ. ಹಲವು ಬಿಲ್ಡರ್​ಗಳ ಫೈಲ್​ಗಳಿಗೆ ಪೆಡ್ಲರ್ ಪ್ರಶಾಂತ್ ಸಹಿ ಹಾಕಿಸಿಕೊಂಡಿದ್ದ.

ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಶಾಂತ್ ರಾಜು ವಿರುದ್ಧ ದೂರು ದಾಖಲಾಗಿತ್ತು. ಡ್ರಗ್ಸ್ ದಂಧೆಯಲ್ಲಿ ಪ್ರಶಾಂತ್​ ಪಾತ್ರದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಪ್ರಶಾಂತ್​ ಪಾತ್ರದ ಬಗ್ಗೆ ಸಿಸಿಬಿ ಮೂಲಗಳಿಂದ ಬಿಟಿವಿಗೆ ಮಾಹಿತಿ ಸಿಕ್ಕಿದೆ. ಪ್ರಶಾಂತ್ ಸಿಕ್ಕಿಬಿದ್ದರೆ ಆ ಖ್ಯಾತ ನಟಿಗೂ ಸಂಕಷ್ಟ ಎದುರಾಗಲಿದೆ.

Comments are closed.