ಮನೋರಂಜನೆ

ಪ್ರೀತಿ ಮಾಡುವುದು ತಪ್ಪು ಎಂದರೆ ರಿಯಾ ಚಕ್ರವರ್ತಿ ಬಂಧನಕ್ಕೆ ಒಳಗಾಗಲು ಸಿದ್ದ: ವಕೀಲ

Pinterest LinkedIn Tumblr


ಮುಂಬೈ: ನಟ ಸುಶಾಂತ್ ಸಿಂಗ್ ಸಾವು ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನಟನ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಎನ್ ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣದಲ್ಲಿ ಮಾದಕ ವಸ್ತು ಪೂರೈಕೆ ವಿಚಾರ ತಳುಕು ಹಾಕಿಕೊಂಡಿರುವ ಕಾರಣ ಎನ್ ಸಿಬಿ ತನಿಖೆ ನಡೆಸುತ್ತಿದ್ದು, ರಿಯಾ ಸಹೋದರ ಶೋವಿಕ್ ಚಕ್ರವರ್ತಿಯನ್ನು ಈಗಾಗಲೇ ಬಂದಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಿಯಾ ಪರ ವಕೀಲ ಸತೀಶ್ ಮಾನಶಿಂಧೆ, ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ರಿಯಾ ಚಕ್ರವರ್ತಿ ಬಂಧನಕ್ಕೆ ಒಳಗಾಗುವುದಕ್ಕೂ ಸಿದ್ಧರಿದ್ದಾರೆ ಎಂದಿದ್ದಾರೆ.

ಪ್ರೀತಿಸುವುದು ಅಪರಾಧ ಎಂದಾದರೆ, ತಮ್ಮ ಪ್ರೀತಿಗಾಗಿ ಪರಿಸ್ಥಿತಿ ಎದುರಿಸಬೇಕು ಎಂದಾದರೆ ರಿಯಾ ಚಕ್ರವರ್ತಿ ಬಂಧನಕ್ಕೆ ಒಳಗಾಗುವುದಕ್ಕೂ ಸಿದ್ಧರಿದ್ದಾರೆ ಎಂದು ವಕೀಲರು ಹೇಳಿದ್ದಾರೆ.

ರಿಯಾ ಚಕ್ರವರ್ತಿ ಮುಗ್ಧರು, ಯಾವುದೇ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿಲ್ಲ ಎಂದೂ ವಕೀಲ ಸತೀಶ್ ಹೇಳಿದ್ದಾರೆ.

Comments are closed.