ಮನೋರಂಜನೆ

ಪಾರ್ಕ್​ನಲ್ಲಿ ನಟಿ ಸಂಯುಕ್ತ ಹೆಗಡೆ ಅರೆ ಬರೆ ಬಟ್ಟೆ ಧರಿಸಿ ಕಿರುಚಾಟ!!: ಸಾರ್ವಜನಿಕರಿಂದ ಆಕ್ರೋಶ

Pinterest LinkedIn Tumblr


ಒಂದ್​​ ಕಡೆ ಇಬ್ಬರು ನಟಿಯರು ಡ್ರಗ್ಸ್​ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ ಮತ್ತೊಂದು ಕಡೆ ಕಿರಿಕ್​​ ಪಾರ್ಟಿ ಬೆಡಗಿ ಸಂಯುಕ್ತಾ ಹೆಗಡೆ ಮತ್ತೊಂದು ಕಿರಿಕ್​ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ಅಗರದ ಪಾರ್ಕ್​​​ನಲ್ಲಿ ಅಸಭ್ಯವರ್ತನೆ ಮಾಡಿದ್ದಾಳೆ ಎಂದು ಸಾರ್ವಜನಿಕರು ದೂರು ಕೊಟ್ಟಿದ್ದಾರೆ. ದೂರಿನ ನಂತ್ರ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

ಪೊಲೀಸರನ್ನು ಕಂಡ ತಕ್ಷಣ ಜಾಲತಾಣದಲ್ಲಿ ಲೈವ್ ಆರಂಭಿಸಿದ ಸಂಯುಕ್ತ ಹೆಗ್ಡೆ ಕಿರುಚಾಡಿದ್ದಾಳೆ. ಸಂಯುಕ್ತ ಕಿರುಚಾಟ ಕಂಡು ನೂರಾರು ಮಂದಿ ಸೇರಿದ್ದಾರೆ. ತಮ್ಮ ತಂಡದ ಜತೆ ಸಂಯುಕ್ತಾ ಹುಲಾ ಹೂಪ್ ಪ್ರಾಕ್ಟೀಸ್​ ಮಾಡುತ್ತಿದ್ದರು. ಈ ವೇಳೆ ಅವರ ಉಡುಗೆ ಬಗ್ಗೆ ಸ್ಥಳೀಯರು ಆಕ್ಷೇಪ ಎತ್ತಿದ್ದಾರೆ. ಗೇಟ್ ಬಂದ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.

Comments are closed.