ಮನೋರಂಜನೆ

ಹೀಗೆ ಆದರೆ ಸುಶಾಂತ್ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ: ಕನ್ನಡದ ಖ್ಯಾತ ನಟಿ

Pinterest LinkedIn Tumblr


ಬೆಂಗಳೂರು: ಕಾನೂನು ಪ್ರಕಾರ ವಿಚಾರಣೆಗೆ ಬಂದ್ರೆ ನಾನು ಹೋಗುತ್ತೇನೆ. ಕಾನೂನು ಪಾಲನೆ ಮಾಡ್ತೀನಿ ಎಂದು ನಟಿ ಸಂಜನಾ ಗಲ್ರಾನಿ ಹೇಳಿದರು.

ಡ್ರಗ್ಸ್​ ಮಾಫಿಯಾದಲ್ಲಿ ನಂಟಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮ್ಮ ಆಪ್ತನಿಗೆ ಸಿಸಿಬಿ ನೋಟಿಸ್​ ನೀಡಿರುವ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಜನಾ, ರಾಹುಲ್​​ಗೆ ಗುರುವಾರ ಬೆಳಗ್ಗೆ ನೊಟೀಸ್ ಕೊಟ್ಟಿರುವುದು ಗೊತ್ತಾಗಿದೆ. ರಾಹುಲ್ ಒಳ್ಳೆಯ ಹುಡುಗ ಆದಷ್ಟು ಬೇಗ ಆಚೆ ಬರಲೆಂದು ಪ್ರಾರ್ಥಿಸುತ್ತೇನೆಂದರು.

ಸ್ಯಾಂಡಲ್​ವುಡ್ ಅಥವಾ ಕನ್ನಡ ಫಿಲ್ಮಂ ಇಂಡಸ್ಟ್ರಿ ಹೆಸರು ಕೆಡಿಸೋದು ಬೇಡ. ಸಾಕ್ಷಿ ಯಾರದ್ದು ಸಿಗುತ್ತೋ ಅವ್ರ ಹೆಸರನ್ನ ಮಾತ್ರ ಹಾಕಿ. ನಾನು 50 ಸಿನಿಮಾ ಮಾಡಿದ ನಟಿ, ನಾನೇನು ಹೊಸ ನಟಿಯಲ್ಲ. ನಾನಾಯ್ತು ಅಥವಾ ನನ್ನ ಕೆಲಸ ಆಯ್ತು ಅಂಥಾ ಸುಮ್ಮನಿರುತ್ತೇನೆ. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಮನೆಯಲ್ಲಿ ನನ್ನು ಪ್ರೀತಿಯ ಶ್ವಾನಗಳ ಜತೆ ಸಮಯ ಕಳೆಯುತ್ತೇನೆ. ನನಗೆ ದೊಡ್ಡ ಮಟ್ಟದಲ್ಲಿ ಹೆಸರು ಇದೆ ಎಂದು ತಿಳಿಸಿದರು.

ಪ್ರಶಾಂತ್ ಸಂಬರಗಿ ಹೆಸರು ನನಗೆ ಗೊತ್ತಿಲ್ಲ. ವಾಣಿಜ್ಯ ಮಂಡಳಿಯವರು ಸಂಬರಗಿ ಮುಖಕ್ಕೆ ಉಗಿದಿದ್ದಾರೆ. ನಾನು ಸಿಂಧಿ ಸ್ಕೂಲ್​ನಲ್ಲಿಯೇ ಓದಿಲ್ಲ. ಪ್ರಶಾಂತ್ ಸಂಬರಗಿ ಡ್ರಗ್ಸ್ ತಗೊಂಡು ಮಾತನಾಡುತ್ತಾ ಇರಬಹುದು? ನನ್ನ ನಾಯಿಗಳಿಗಿಂತ ಕೆಳಗೆ ಇದ್ದಾನೆ. ಸಂಬರಗಿ ಏನೂ ಸಾಧಿಸಿಲ್ಲ. ಫಿಲ್ಮಂ ಇಂಡಸ್ಟ್ರಿ ಬಗ್ಗೆ ಮಾತನಾಡೋಕೆ ಯಾರು ಅವನು? ಪ್ರಶಾಂತ್ ಸಂಬರಗಿ ಒಬ್ಬ ಬಕ್ರಾ ಎಂದು ವಾಗ್ದಾಳಿ ನಡೆಸಿದರು.

ಎಲ್ಲಾ ಮೀಡಿಯಾಗಳನ್ನು ಬಕ್ರಾ ಮಾಡಿ ಪ್ರಚಾರ ತಗೋತಾ ಇದಾನೆ. ಪ್ರಶಾಂತ್ ಸಂಬರಗಿಗೆ ನನ್ನ ಹೆಸರು ಹೇಳೋಕೆ ಧಮ್ ಇಲ್ಲ. ಇನ್ನೂ ನನ್ನ ಬಗ್ಗೆ ಕೆಟ್ಟದಾಗಿ ಹೇಳಿದ್ರೆ ಸಂಬರಗಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಆದಷ್ಟು ಬೇಗ ಸ್ಯಾಂಡಲ್​ವುಡ್​ಗೆ ಬಂದಿರೋ ಇಂಥ ಕಳಂಕ ಮುಕ್ತ ಆಗಬೇಕು. ಕನ್ನಡ ಇಂಡಸ್ಟ್ರಿ ಒಂದು ಗಂಧದಗುಡಿ ರೀತಿ ಇದೆ ಎಂದರು.

ಸುಶಾಂತ್ ಥರ ನೇಣು ಹಾಕಿಕೊಳ್ಳಬೇಕಾ?
ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಸಂಜನಾ ಒಂದೇ ವಿಚಾರ ಎಷ್ಟು ಅಂತ ಮಾತನಾಡೋಣಾ? ನನಗೆ ಎಷ್ಟು ಅಂತ ತೊಂದರೆ ಕೊಡ್ತೀರಿ. ಹೀಗೆ ಆದರೆ ಸುಶಾಂತ್ ರೀತಿ ಸೂಸೈಡ್ ಮಾಡ್ಕೋಬೇಕಾಗುತ್ತೆ. ನಾನು ರೇಡಿಯೋ ಚಾನೆಲ್ಲಾ ಅಥವಾ ಮನುಷ್ಯಳಾ? ಎಷ್ಟು ಸಲ ಮಜ ತಗೋತೀರಾ? ಹೀಗೆ ತಲೆಮೇಲೆ ಕೂತ್ರೆ ಹೇಗೆ ನೀವು? ಎಂದೆಲ್ಲಾ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

Comments are closed.