
ಬೆಂಗಳೂರು: ಡ್ರಗ್ಸ್ ಜಾಲ ಅಥವಾ ಮಾದಕ ಪದಾರ್ಥದ ಅಭ್ಯಾಸ ಚಿತ್ರರಂಗ ಮಾತ್ರವಲ್ಲದೆ ಎಲ್ಲೆಡೆ ವ್ಯಾಪಿಸಿದೆ ಎಂದು ನಟಿ ಹಾಗೂ ಸಂಸದೆ ಹೇಳಿದ್ದಾರೆ.
ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಚೇತರಿಕೆಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಡನೆ ಮಾತನಾಡಿ, ಚಿತ್ರರಂಗಕ್ಕೆ ಕಾಲಿಟ್ಟು 45 ವರ್ಷಗಳಾಗಿವೆ. ಈ ಅವಧಿಯಲ್ಲಿ ಡ್ರಗ್ಸ್ ಬಗ್ಗೆ ಕೇಳಿಲ್ಲ, ನೋಡಿಲ್ಲ. ಹಾಗಂತ ಇಲ್ಲವೇ ಇಲ್ಲ ಎಂದು ಹೇಳಲಾಗದು ಎಂದಿದ್ದಾರೆ.
ಡ್ರಗ್ಸ್ ನ ಕಂಟ್ರೋಲ್ ಮಾಡೋಕೆ ಅಂತಾ ಏಜೆನ್ಸಿ ಇದೆ. ಖಂಡಿತ ಯಾರೂ ಇದರಲ್ಲಿ ಪಾಲ್ಗೊಂಡಿದ್ದಾರೋ ಅವರನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ನಾನು ಒಬ್ಬ ಸೆಲೆಬ್ರಿಟಿ ಆಗಿ ಅಲ್ಲ. ಒಬ್ಬ ತಾಯಿಯಾಗಿ ಹೇಳುತ್ತಿದ್ದೇನೆ. ಯುವಜನರು ದುಶ್ಚಟಗಳ ದಾಸರಾಗುವುದು ತಪ್ಪು ಎಂದರು.
ಬರೀ ಚಿತ್ರರಂಗ ಅಂತ ಅಲ್ಲ. ಎಲ್ಲಾ ಕಡೆಯೂ ಈ ಡ್ರಗ್ಸ್ ಮಾಫಿಯಾ ಇದೆ ಎಂದು ಸುಮಲತಾ ಹೇಳಿದ್ದಾರೆ.
Comments are closed.