
ಪಾಟ್ನಾ:ನನ್ನ ಮಗನನ್ನು ಕೊಲೆ ಮಾಡಿದ್ದು ರಿಯಾ ಚಕ್ರವರ್ತಿ, ಆಕೆಯನ್ನು ಬಂಧಿಸಿ ಎಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಕೆ ಕೆ ಸಿಂಗ್ ಒತ್ತಾಯಿಸಿದ್ದಾರೆ.
ರಿಯಾ ಚಕ್ರವರ್ತಿ ನನ್ನ ಮಗನಿಗೆ ಹಲವು ಸಮಯಗಳಿಂದ ವಿಷ ಉಣ್ಣಿಸುತ್ತಿದ್ದಳು, ನನ್ನ ಮಗನನ್ನು ಆಕೆಯೇ ಕೊಲೆ ಮಾಡಿದ್ದು, ತನಿಖಾ ಸಂಸ್ಥೆ ಆಕೆ ಮತ್ತು ಆಕೆಯ ಸಹಚರರನ್ನು ಬಂಧಿಸಬೇಕು ಎಂದು ವಿಡಿಯೊವೊಂದರಲ್ಲಿ ಕೆ ಕೆ ಸಿಂಗ್ ಹೇಳಿದ್ದಾರೆ.
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ರಿಯಾ ಮತ್ತು ಆಕೆಯ ಸಹಚರರ ವಿರುದ್ಧ ಮಾದಕ ದ್ರವ್ಯ ಇಲಾಖೆ ಕೇಸು ದಾಖಲಿಸಿದ ನಂತರ ಸುಶಾಂತ್ ತಂದೆ ಹೀಗೆ ಹೇಳಿದ್ದಾರೆ. 1985ರ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ನಡಿ ಮಾದಕ ದ್ರವ್ಯ ತಡೆ ಸಂಸ್ಥೆ ಅಪರಾಧ ಮತ್ತು ಕ್ರಿಮಿನಲ್ ಪಿತೂರಿ ಕೇಸು ದಾಖಲಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಮುಂಬೈನ ಬಾಂದ್ರಾದಲ್ಲಿನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಜೂನ್ 14ರಂದು ಸಾವಿಗೀಡಾಗಿದ್ದರು.
Comments are closed.